Advertisement

ಅಂತರ ಕಾಲೇಜು ಅಥ್ಲೆಟಿಕ್ಸ್‌ಗೆ ಚಾಲನೆ

12:36 PM Oct 23, 2018 | |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಅಂತರ ಕಾಲೇಜು ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ಗೆ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ವಿವಿಯ ಕುಲಪತಿ ಪ್ರೊ.ಎಸ್‌.ಜಾಫೆಟ್‌ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

Advertisement

ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 80 ಕಾಲೇಜುಗಳ 800ಕ್ಕೂ ಅಧಿಕ ಕ್ರೀಡಾಪಟುಗಳು ಚಾಂಪಿಯನ್‌ಶಿಪ್‌ನಲ್ಲಿ ಭಾಗಹಿಸಿದ್ದರು. ವಿವಿಧ ಮಾದರಿಯ ಓಟ, ರಿಲೆ, ಎತ್ತರ ಜಿಗಿತ, ಉದ್ಧ ಜಿಗಿತ ಸಹಿತ ವೈಯಕ್ತಿಕ ಮತ್ತು ತಂಡದ 44 ಬಗೆಯ ಸ್ಪರ್ಧೆಗಳು ಮಂಗಳವಾರ ಕೂಡ ನಡೆಯಲಿವೆ.

ಅಂತರ್‌ ಕಾಲೇಜು ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ ವಿಜೇತರು ಮತ್ತು ತಂಡಗಳು ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಅಖೀಲ ಭಾರತೀಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ವಿವಿಯ ಕುಲಸಚಿವ ಡಾ.ಎಂ.ರಾಮಚಂದ್ರಗೌಡ, ಮೌಲ್ಯಮಾಪನ ಕುಲಸಚಿವ ಲಿಂಗರಾಜುಗಾಂಧಿ, ಮಾಜಿ ಅಥ್ಲೀಟ್‌ಗಳಾದ ಮೊಹಮ್ಮದ್‌ ಮುದಾಸೀರ್‌, ಪ್ರಮೀಳಾ ಅಯ್ಯಪ್ಪ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಮೊಹಮ್ಮದ್‌ ಇಲಿಯಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next