ರಬಕವಿ-ಬನಹಟ್ಟಿ: ಸಮೀಪದ ಯಲ್ಲಟ್ಟಿ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಬನಹಟ್ಟಿ ನಗರದ ಖಜಾನೆ ಕಚೇರಿ ಬಳಿ ಸೌಹಾರ್ದತಾ ಮ್ಯಾರಾಥಾನ್ ಓಟಕ್ಕೆ ಶನಿವಾರ ಬೆಳಿಗ್ಗೆ 6.30 ಗಂಟೆಗೆ ಕೊಣ್ಣೂರು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪ್ರೊ. ಬಸವರಾಜ ಕೊಣ್ಣೂರ, ಮ್ಯಾರಾಥಾನದಿಂದ ನಮ್ಮಲ್ಲಿ ಏಕತೆಯ ಭಾವನೆ ಮೂಡುತ್ತದೆ. ಜೊತೆಗೆ ಉತ್ತಮ ಆರೋಗ್ಯವನ್ನು ಕೂಡಾ ಹೊಂದುತ್ತೇವೆ. ಮ್ಯಾರಾಥಾನ್ ನಿಂದ ಒಂದೂಗೂಡಿವಿಕೆ ಸಾಧ್ಯ. ಮ್ಯಾರಾಥಾನ್ ಗಳು ಒಂದಿಲ್ಲ ಒಂದು ಸಂದೇಶ ಸಾರುತ್ತವೆ. ನೂರಾರು ವಿದ್ಯಾರ್ಥಿಗಳು ಮತ್ತು ರಬಕವಿ, ಬನಹಟ್ಟಿ, ಜಮಖಂಡಿ ಹಾಗೂ ಸುತ್ತ ಮುತ್ತಲಿನ ಹಿರಿಯರು, ಯುವಕರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ಸಂದರ್ಬದಲ್ಲಿ ಹಿರಿಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮ, ಸದಾಚಾರ, ಸನ್ನಡತೆಗಾಗಿ ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮ್ಯಾರಾಥಾನ್‌ನ ಉದ್ದೇಶವಾಗಿದೆ. ಇಂದಿನ ಮಕ್ಕಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬಿತ್ತರಿಸುವ ನಿಟ್ಟಿನಲ್ಲಿ ಕೊಣ್ಣೂರ ಪ್ರೌಢಶಾಲೆಯವರು ಸೌಹಾರ್ದತಾ ಮ್ಯಾರಥಾನ್ ಓಟ ಹಮ್ಮಿಕೊಂಡಿದ್ದಾರೆ. ಸಮಾಜದಲ್ಲಿ ನಾವ್ಯಾರೂ ಮೇಲು ಕೀಳು ಎಂಬ ಭಾವನೆ ಬರಬಾರದು, ನಾವೆಲ್ಲರೂ ಸಮಾನರೂ ಎಂಬ ಅರ್ಥವನ್ನು ಸಮಾಜಕ್ಕೆ ತೋರಿಸುವ ಕೆಲಸವನ್ನು ಕೊಣ್ಣೂರ ಕಾಲೇಜ್‌ನ ಪ್ರಾಚಾರ್ಯರು ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಮಖಂಡಿ ಹಿರಿಯ ನ್ಯಾಯವಾದಿ ಎನ್. ಎಸ್. ದೇವರರವರ, ಮುಧೋಳದ ಅರಳಿಕಟ್ಟಿ ಫೌಂಡೇಶನದ ಟಿ. ವಿ. ಅರಳಿಕಟ್ಟಿ, ಬ್ರಿಜ್‌ಮೋಹನ ಡಾಗಾ, ಸುರೇಶ ಚಿಂಡಕ, ಮುರಳಿ ಕಾಬರಾ, ನಿಖೀಲ ಕೊಣ್ಣೂರ, ಬದ್ರಿನಾರಾಯಣ ಲಡ್ಡಾ, ಈರಯ್ಯ ಕಾಡದೇವರ, ಶ್ರೀಶೈಲ ಉಳ್ಳಾಗಡ್ಡಿ, ವೆಂಕಟೇಶ ನಿಂಗಸಾನಿ, ಡಾ. ಪ್ರಭು ಪಾಟೀಲ, ಡಾ. ಅಭಿನಂದನ ಡೋರ್ಲೆ, ಡಾ. ವಿನೋದ ಮೇತ್ರಿ, ಚಂದ್ರಶೇಖರ ಕುಲಗೋಡ, ಕಲ್ಲಪ್ಪ ಹೊರಟ್ಟಿ, ಚಂದ್ರಕಾಂತ ಹೊಸೂರ, ಬುಜಬುಲಿ ಕೆಂಗಾಲಿ, ಎಂ. ಬಿ. ಮಗದುಮ್, ದುಂಡಯ್ಯ ಮಠದ, ಈರಣ್ಣ ಯಾದವಾಡ ಹಾಗೂ ವಾಯು ವಿಹಾರ ಬಳಗ ಸೇರಿದಂತೆ ಶಾಲೆಯ ನೂರಾರೂ ವಿದ್ಯಾರ್ಥಿಗಳು ಮ್ಯಾರಾಥಾನ ಓಟದಲ್ಲಿ ಭಾಗವಹಿಸಿದ್ದರು.