ಮಂಗಳೂರು: ಧರ್ಮಸ್ಥಳದ ಕಕ್ಕಿಂಜೆ ಗ್ರಾಮದ ಬಳಿ ಉಪಗ್ರಹ ಕರೆಗಳು ಮತ್ತು ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂಬ ವದಂತಿಗಳಿಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಾನೆ, ಧರ್ಮಸ್ಥಳ ಪೊಲೀಸರು ವದಂತಿಗಳನ್ನು ಪರಿಶೀಲಿಸಿದ್ದು, ಉಪಗ್ರಹ ಕರೆಗಳ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಇದಲ್ಲದೆ, ಸ್ಫೋಟದ ಶಬ್ದಗಳು ಸಾಮಾನ್ಯವಾಗಿ ಸ್ಥಳೀಯ ನಿವಾಸಿಗಳು ಆನೆಗಳನ್ನು ಹೆದರಿಸಲು ಬಳಸುವ ಪಟಾಕಿಗಳಿಗೆ ಸಂಬಂಧಿಸಿವೆ ಎಂದು ಸೋನಾವಾನೆ ಹೇಳಿದ್ದಾರೆ.
ಮಂಗಳೂರು ಸ್ಫೋಟದ ಹಿಂದಿನ ದಿನ ಬೆಳ್ತಂಗಡಿಯ ಬೇಂದ್ರಾಳದ ಬಾರೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಬೇಂದ್ರಾಳ ಪ್ರದೇಶದಲ್ಲಿ ಶನಿವಾರ ಶೋಧ ನಡೆಸಿದ್ದರು. ಆದರೆ, ಸ್ಥಳದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಮೈಸೂರು ಬಸ್ ನಿಲ್ದಾಣದ ಮೇಲಿದ್ದ ಎರಡು ಗುಂಬಜ್ ಗಳ ತೆರವು