Advertisement

ಶಾರುಖ್‌ ಡಂಕಿ ಮುಂದಕ್ಕೆ?

03:11 PM Oct 14, 2023 | Team Udayavani |

ಶಾರುಖ್‌ ಖಾನ್‌ ಅಭಿನಯದ “ಡಂಕಿ’ ಚಿತ್ರ ಡಿ.22ಕ್ಕೆ ತೆರೆಕಾಣುವುದಾಗಿ ಘೋಷಿಸಿಕೊಂಡಿತ್ತು. ಅದೇ ದಿನ ಪ್ರಭಾಸ್‌ ನಟನೆಯ “ಸಲಾರ್‌’ ಕೂಡಾ ಬರಲಿದೆ. ಈಗ ಬಿಟೌನ್‌ ನಲ್ಲಿ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ಅದು “ಡಂಕಿ’ ಚಿತ್ರದ ಬಿಡುಗಡೆ ಕುರಿತು.

Advertisement

ಹೌದು, “ಡಂಕಿ’ ಚಿತ್ರ “ಸಲಾರ್‌’ಗೆ ಹೆದರಿಕೊಂಡು ಮುಂದೆ ಹೋಗಲಿದೆಯಂತೆ. ಹಾಗಂತ ಈ ಕುರಿತು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಬದಲಾಗಿ “ಸಲಾರ್‌’ ಹವಾ ಜೋರಾಗಿರುವುದರಿಂದ ಅದರ ಮುಂದೆ ಬಂದು ರಿಸ್ಕ್ ಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಶಾರುಖ್‌ ನಟನೆಯ ಈ ಹಿಂದಿನ ಎರಡು ಚಿತ್ರಗಳು ಹಿಟ್‌ ಆಗುವ ಮೂಲಕ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next