“ರಮ್ಮಿ ಆಟ’ ಚಿತ್ರದ ಹಾಡು ಹಾಗೂ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರ ಸೆ.20ರಂದು ತೆರೆಕಾಣುತ್ತಿದೆ.
ಆನ್ ಲೈನ್ ಗೇಮ್ ಈಗಿನ ಯುವ ಜನತೆಯನ್ನು ಹೇಗೆ ಹಾಳು ಮಾಡುತ್ತಿದೆ. ಅದರಿಂದ ಏನೆಲ್ಲ ಅನಾಹುತಗಳಾಗುತ್ತಿವೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ರಮ್ಮಿ ಆಟ ಎಂಬ ಚಿತ್ರವನ್ನು ಉಮರ್ ಷರೀಫ್ ನಿರ್ಮಿಸಿದ್ದಾರೆ. ಜೊತೆಗೆ ನಿರ್ದೇಶನ ಕೂಡಾ ಇವರದ್ದೇ.
ಚಿತ್ರದ ನಿರ್ಮಾಪಕ ನಿರ್ದೇಶಕ ಉಮರ್ ಷರೀಫ್ ಮಾತನಾಡಿ “ಚಿತ್ರದಲ್ಲಿ ಸೂಪರ್ ಹೀರೋ ಅಂದರೆ ಸಂಭಾಷಣೆ. ಸೆಲೆಬ್ರೆಟಿಗಳ ಜವಾಬ್ದಾರಿಯನ್ನು ನೆನಪಿಸುವಂಥ ಸಂಭಾಷಣೆ ಗಳನ್ನು ಮಾಡಿದ್ದೇವೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಿದ್ದೇವೆ’ ಎಂದರು.
ನಿರೂಪಕರಾಗಿದ್ದ ರಾಘವ ಸೂರ್ಯ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಟ
ಸೈಯದ್ ಇರ್ಫಾನ್ ಹಿರಿಯ ನ್ಯಾಯವಾದಿಯಾಗಿ ಬಣ್ಣ ಹಚ್ಚಿದ್ದಾರೆ. ಮಂಗಳೂರು ಮೂಲದ ಕಿರುತೆರೆನಟಿ ವಿನ್ಯಾ ಶೆಟ್ಟಿ ಅವರು ಈ ಚಿತ್ರದಲ್ಲಿ ಗೌರಿ ಎಂಬ ಪಾತ್ರ ನಿರ್ವಹಿಸಿದ್ದು, ಸ್ನೇಹಾರಾವ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.