Advertisement

Rummy Aata Movie: ರಮ್ಮಿ ಆಟ! -ಇದು ಸಿನಿಮಾ ಟೈಟಲ್‌..

12:20 PM Aug 28, 2024 | Team Udayavani |

ಆನ್‌ ಲೈನ್‌ ರಮ್ಮಿ ಆಡುವುದರಿಂದ ಏನೆಲ್ಲ ತೊಂದರೆಗಳಾಗುತ್ತವೆ, ಜನ ಯಾವ ರೀತಿ ಮೋಸ ಹೋಗುತ್ತಾರೆ. ಈ ಆಟದಿಂದ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ನು ಇಟ್ಟುಕೊಂಡು ಸಿನಿಮಾವೊಂದು ತಯಾರಾಗುತ್ತಿದೆ. ಈ ಚಿತ್ರಕ್ಕೆ “ರಮ್ಮಿ ಆಟ’ ಎಂಬ ಟೈಟಲ್‌ ಇಡಲಾಗಿದೆ.

Advertisement

ಚಿತ್ರಕ್ಕೆ ಉಮರ್‌ ಷರೀಫ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣ ಸಹ ಮಾಡಿದ್ದಾರೆ. ಒಂದಷ್ಟು ಡ್ರಾಮಾ ಕಥೆ ಬರೆದು ನಿರ್ದೇಶನ ಮಾಡಿರುವ ಉಮರ್‌ ಪರೀಫ್ ಅವರ ನಿರ್ದೇಶನದ ಮೊದಲ ಚಿತ್ರವಿದು. ಈಗಾಗಲೇ ತನ್ನ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ “ಯು’ ಸರ್ಟಿಫಿಕೇಟ್‌ ಸಿಕ್ಕಿದೆ.

ಮುಂದಿನ ತಿಂಗಳು ಚಿತ್ರವನ್ನು ರಿಲೀಸ್‌ ಮಾಡುವ ಸಿದ್ಧತೆ ನಡೆದಿದೆ. ನೆರಳು ಮೀಡಿಯಾ ಥ್ರೂ ಲಿಖೀತ್‌ ಫಿಲಂಸ್‌ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರ ನಡೆಸಲಾಗಿದೆ.

ಎಯ್ಟ್ ಏಂಜಲ್ಸ್‌ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್‌ ಎಸ್‌. ಅವರ ಛಾಯಾಗ್ರಹಣ, ಉಮರ್‌ ಅವರ ಸಂಭಾಷಣೆ, ಅಮೀರ್‌ ಅವರ ಸಾಹಸವಿದೆ. ರಾಘವ ಸೂರ್ಯ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿನ್ಯಾ ಶೆಟ್ಟಿ, ಸ್ನೇಹಾ ರಾವ್‌, ಅಭಿಗೌಡ, ಶ್ರೀಕರ್‌, ರೋಷನ್‌, ಗಿರೀಶ, ನೋಹನ್‌ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.