Advertisement

Mahua Moitra ವಿವಾದ: ಲೋಕಸಭೆಯ ವೆಬ್‌ಸೈಟ್‌ಗೆ ಪ್ರವೇಶದ ನಿಯಮಗಳು ಬದಲು

05:51 PM Nov 23, 2023 | Team Udayavani |

ಹೊಸದಿಲ್ಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ಲಂಚ ಪ್ರಕರಣದ ಆರೋಪ ಪ್ರಕರಣದ ವಿವಾದದ ಬೆನ್ನಲ್ಲೇ ಲೋಕಸಭೆಯ ವೆಬ್‌ಸೈಟ್‌ಗೆ ಪ್ರವೇಶದ ನಿಯಮಗಳನ್ನು ಬದಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ವೈಯಕ್ತಿಕ ಸಿಬಂದಿ ಅಥವಾ ಯಾವುದೇ ಮೂರನೇ ವ್ಯಕ್ತಿ ಡಿಜಿಟಲ್ ಸಂಸದ್ ವೆಬ್‌ಸೈಟ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಸಂಸದರ ಪರವಾಗಿ ಸೂಚನೆಗಳನ್ನು ನೀಡಲು ಅಥವಾ ಪ್ರಶ್ನೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಸಂಸದರು ಮಾತ್ರ ತಮ್ಮ ವೈಯಕ್ತಿಕ ಲಾಗಿನ್ ವಿವರಗಳನ್ನು ಬಳಸಿಕೊಂಡು ಸೈಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಸಂಸದರ ನೋಂದಾಯಿತ ಮೊಬೈಲ್ ಫೋನ್‌ಗಳಲ್ಲಿ OTPಬರುತ್ತದೆ ಮತ್ತು ಅವರು ಕೋಡ್ ಅನ್ನು ನಮೂದಿಸಿದ ನಂತರ ಮಾತ್ರ ಸೈಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿ ಆರೋಪಿಸಿದ ಬಳಿಕ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next