Advertisement

ಪಾಳುಬಿದ್ದ ವಸತಿ ಗೃಹಗಳು

11:23 AM Jun 15, 2019 | Team Udayavani |

ಹೊನ್ನಾವರ: 50 ವರ್ಷಕ್ಕೂ ಹಿಂದೆ ನಿರ್ಮಾಣವಾದ ತಾಲೂಕು ಆಸ್ಪತ್ರೆಯ 13 ಸಿಬ್ಬಂದಿ ವಸತಿಗೃಹಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಭಾಗಶಃ ಕುಸಿದಿದೆ. ಎರಡು ಸಾಧಾರಣವಿದ್ದು ಅದರಲ್ಲಿ ಇಬ್ಬರು ಸಿಬ್ಬಂದಿ ನೆಲೆಸಿದ್ದಾರೆ. ವಸತಿಗೃಹದಲ್ಲಿ ವೈದ್ಯರು ವಾಸಿಸುತ್ತಿಲ್ಲ, ಸಿಬ್ಬಂದಿ ವಾಸಿಸಲು ಯೋಗ್ಯವಲ್ಲವಾದರೂ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ.

Advertisement

ಉತ್ತಮ ವೈದ್ಯಕೀಯ ಸೇವೆ ನೀಡುವ ಎಲ್ಲಾ ವಿಭಾಗದ ವೈದ್ಯರನ್ನೊಳಗೊಂಡ ಸರ್ಕಾರಿ ಆಸ್ಪತ್ರೆ ವಸತಿಗೃಹಗಳಲ್ಲಿ ವೈದ್ಯರು ಉಳಿದುಕೊಂಡಿದ್ದರೆ ತುರ್ತು ಸೇವೆಗೆ ಅನುಕೂಲವಾಗುತ್ತಿತ್ತು. ಈಗ ರಾತ್ರಿ ಪಾಳಿ ವೈದ್ಯರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವಂತಾಗಿದೆ. ಡಯಾಲಿಸಿಸ್‌ ಘಟಕದಲ್ಲಿ ಸೇವೆ ನೀಡುವ ಗುತ್ತಿಗೆ ಸಿಬ್ಬಂದಿಗೂ ವಸತಿ ಇಲ್ಲ. ಪಾಳಿಯ ಮೇಲೆ ಕೆಲಸ ಮಾಡುವ ನರ್ಸ್‌ಗಳಿಗೂ ಆಸ್ಪತ್ರೆ ಕೋಣೆಯೇ ಗತಿ.

10 ವೈದ್ಯರು, 25 ಸ್ಟಾಪ್‌ನರ್ಸ್‌ ಸಹಿತ 43 ಸಿಬ್ಬಂದಿಗಳಿದ್ದಾರೆ. ಇದರ ಹೊರತು ಗುತ್ತಿಗೆ ನೌಕರರಿದ್ದಾರೆ. ವಿಶ್ರಾಂತಿಗೆ, ಬಟ್ಟೆ ಬದಲಾಯಿಸಲು, ಊಟ ಮಾಡಲು ಆಸ್ಪತ್ರೆಯ ಖಾಲಿ ಕೋಣೆಯೇ ಗತಿ. ಎಲ್ಲ ವೈದ್ಯರು ಸ್ವಂತ ಅಥವಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕರೆ ನೀಡಿದ ತಕ್ಷಣ ಬರಲು ಕಷ್ಟವಾಗುತ್ತದೆ. ಇದೇ ಸ್ಥಿತಿಯಲ್ಲಿ ಮಂಗನ ಕಾಯಿಲೆ ಎರವಲು ಪಡೆದ ಕಟ್ಟಡವೂ ಇದೆ. ಸಾಕಷ್ಟು ಭೂಮಿ ಇದೆ, ಒಂದು ಬಹುಮಹಡಿ ಕಟ್ಟಡ ನಿರ್ಮಾಣವಾದರೆ ವೈದ್ಯರು, ಸಿಬ್ಬಂದಿ ಒಂದೆಡೆ ಉಳಿದು ಜನರಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿತ್ತು. ರಾತ್ರಿ ಕರ್ತವ್ಯದ ವೈದ್ಯರು ಮತ್ತು ಸಿಬ್ಬಂದಿ, ಸಂಜೆಯಾಗುತ್ತಲೇ ರೋಗಿಗಳ ಹೊರತಾಗಿ ಆಸ್ಪತ್ರೆ ಆವಾರ ಖಾಲಿಖಾಲಿ. 5ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಟ್ಟು, ಎಲ್ಲ ವಿಭಾಗದ ವೈದ್ಯರು, ಸಿಬ್ಬಂದಿಯನ್ನು ಕೊಟ್ಟ ಸರ್ಕಾರ ಬೇಗ ಉಳಿಯುವ ವ್ಯವಸ್ಥೆ ಮಾಡಿಕೊಡಲಿ.

Advertisement

Udayavani is now on Telegram. Click here to join our channel and stay updated with the latest news.

Next