Advertisement

ಪಾಳು ಬಿದ್ದಿದೆ ಎಎನ್‌ಎಂ ಉಪಕೇಂದ್ರ

03:08 PM Jan 22, 2018 | |

ಇಂಡಿ: ಸರ್ಕಾರಗಳು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಜಾರಿಗೊಳಿಸಿದರೂ ಆ ಯೋಜನೆಗಳು ಮಾತ್ರ ಜನರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ಸುಮಾರು ಐದು ವರ್ಷದ ಹಿಂದೆ ನಿರ್ಮಾಣ ಮಾಡಿದ ಎಎನ್‌ಎಂ ಉಪಕೇಂದ್ರ. ಇದಕ್ಕೆ ಸುಸಜ್ಜಿತ
ಕಟ್ಟಡ ನಿರ್ಮಿಸಿ ಸುತ್ತಲೂ ಗೋಡೆಗೆ ಸುಣ್ಣ ಬಣ್ಣ ಬಡಿದು ದ್ವಾರ ಬಾಗಿಲಿಗೆ ಬೀಗ ಹಾಕಲಾಗಿದೆ. ಆದರೆ ಇದುವರೆಗೂ
ಅಲ್ಲಿ ಒಬ್ಬ ವೈದ್ಯರೂ ಕಾಲಿಟ್ಟಿಲ್ಲ. ಹಾಕಿದ ಬೀಗವನ್ನೂ ತೆಗೆದಿಲ್ಲ. ಹೀಗಾಗಿ ಈ ಕಟ್ಟಡ ಕುಡುಕರಿಗೆ ಮತ್ತು ಅನೈತಿಕ ಚಟುವಟಿಕೆ ಮಾಡುವವರಿಗೆ ಸ್ವರ್ಗವಾದಂತಾಗಿದೆ.

Advertisement

ಇನ್ನು ಕಟ್ಟಡದ ಸುತ್ತೆಲ್ಲವೂ ಕಂಟಿ ಬೆಳೆದಿದ್ದು ಅಲ್ಲೇ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಸೊಳ್ಳೆಗಳು ಹೆಚ್ಚಾತ್ತಲಿವೆ. ಇದರಿಂದ ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ. ಅಲ್ಲಿ ವೈದ್ಯರನ್ನು ನೇಮಕ ಮಾಡಿದ್ದೇ ಆದಲ್ಲಿ ಆವರಣವೂ ಸ್ವತ್ಛವಾಗಿಸಿದಂತಾಗುತ್ತದೆ. ಮತ್ತು ಜನರಿಗೆ ಗ್ರಾಮದಲ್ಲೇ ರೋಗ ನಿವಾರಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಗ್ರಾಮಸ್ಥರು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ
ಮಾಡಿಕೊದರೂ ಪ್ರಯೋಜನವಾಗಿಲ್ಲ.

ಎಎನ್‌ಎಂ ಉಪ ಕೇಂದ್ರಕ್ಕೆ ವೈದ್ಯರನ್ನು ನೇಮಿಸಿದರೆ ದೂರದ ಇಂಡಿ ಪಟ್ಟಣಕ್ಕೆ ಬರುವ ಅವಶ್ಯಕತೆ ಜನರಿಗೆ ಬಿಳುವುದಿಲ್ಲ ಇಂಡಿ ಪಟ್ಟಣಕ್ಕೆ ಹೋಗಿ ಬರಬೇಕಾದರೆ ಒಂದು ದಿನ ಮುಗಿದು ಹೋಗುತ್ತದೆ. ಇಲ್ಲೇ ವೈದ್ಯರನ್ನು ನೇಮಕ ಮಾಡಿದರೆ ಒಳಿತಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. 

ಗ್ರಾಪಂ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ನಾಲ್ಕೈದು ಬಾರಿ ಸಂಬಂಧಿಸಿದ ಇಲಾಖಾ ಅಧಿ ಕಾರಿಗಳಿಗೆ ದೂರವಾಣಿ ಮತ್ತು ಪತ್ರದ ಮೂಲಕ ಎಎನ್‌ಎಂ ಉಪಕೇಂದ್ರದ ಬಗ್ಗೆ ತಿಳಿಸಿದ್ದು ಅಧಿಕಾರಿಗಳು ಸ್ಪಂದಿಸಿದ್ದಾರೆ. ಕೆಲ ದಿನಗಳಲ್ಲಿ ವೈದ್ಯರ ನೇಮಕ ಮಾಡುವ ಆಶ್ವಾಸನೆ ನೀಡಿದ್ದಾರೆ.
 ಸಂತೋಷ ಜಂಗಮಶೆಟ್ಟಿ,ನಾದ ಕೆ.ಡಿ, ಗ್ರಾಪಂ ಅಧ್ಯಕ್ಷ

ಉಮೇಶ ಬಳಬಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next