Advertisement
ಮಾವಿನ ಎಲೆಯಾಕಾರದ ನಿತ್ಯ ಹಸುರೆಲೆಗಳಿಂದ ಕಂಗೊಳಿಸುವ ಇವು ಸುಮಾರು 50ರಿಂದ 100 ಅಡಿಗಳಷ್ಟು ಎತ್ತರ ಬೆಳೆಯುತ್ತವೆ.
Related Articles
Advertisement
ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು
ರಚನೆ
ರುದ್ರಾಕ್ಷಿ ಎಂದೊಡನೆ ‘ನಿಮ್ಮಲ್ಲಿ ಏಕಮುಖಿ ಇದ್ದರೆ ನನಗೆ ಕೊಡುವಿರಾ?’ ಎಂದು ಕೇಳುವವರೇ ಅಧಿಕ. ಶುದ್ಧೀಕರಿಸಿದ ರುದ್ರಾಕ್ಷಿ ಹೊರಮೈಯಲ್ಲಿ ಚಿತ್ರ – ವಿಚಿತ್ರ ಸಂಜ್ಞೆಗಳಂತಿರುವ ಉಬ್ಬು ರಚನೆಗಳಾಗಿದ್ದು ಅವನ್ನು ಜಗತ್ತಿನ ಹಲವಾರು ಭಾಷಾ ಲಿಪಿಗಳಲ್ಲಿ ‘ಓಂ’ ಎಂಬ ಅಕ್ಷರಗಳು ಎಂದು ಗುರುತಿಸಿದ್ದಾರೆ. ರುದ್ರಾಕ್ಷಿ ಮೇಲ್ಭಾಗದಿಂದ ತುದಿಯವರೆಗೆ ಮಧ್ಯಭಾಗದಲ್ಲಿರುವ ರಂಧ್ರದ ಮೂಲಕ ಹಾರ ಮಾಡಲು ಅನುಕೂಲ, ಹೊರ ಮೈಯಲ್ಲಿ ಹಲವು 0, 1, 2, 3, 4 ಇತ್ಯಾದಿ ರೇಖೆಗಳಿವೆ. ಏಕಮುಖಿಯಲ್ಲಿ ಒಂದು; ದ್ವಿಮುಖಿಯಲ್ಲಿ ಎರಡು, ತ್ರಿಮುಖಿಯಲ್ಲಿ ಮೂರು ಇತ್ಯಾದಿ ರೇಖೆಗಳಿವೆ. ಐದು ರೇಖೆಗಳಿದ್ದರೆ ಪಂಚಮುಖಿ, 11 ರೇಖೆಯಿದ್ದರೆ ಏಕಾದಶಮುಖಿಯೆನ್ನುತ್ತಾರೆ. ಒಂದೇ ವೃಕ್ಷದಲ್ಲಿ ಇಂಥ ಹಲವಾರು ಮುಖಗಳು ದೊರಕುವುದಾದರೆ ಹೆಚ್ಚಿನ (ಶೇ. 90) ಪಂಚಮುಖಿಗಳು. 3, 4, 6, 7 ಮುಖಗಳು ಕೆಲವು ಮಾತ್ರ. ಹೆಚ್ಚು ಮುಖದ ರುದ್ರಾಕ್ಷಿಗಳು ಬಹಳ ಅಪರೂಪ. ನಮ್ಮಲ್ಲಿರುವ ಎರಡು ವೃಕ್ಷಗಳು ನೀಡಿರುವ ಸುಮಾರು ನಾಲ್ಕು ಸಾವಿರ ರುದ್ರಾಕ್ಷಿಗಳಲ್ಲಿ ಒಂದೇ ಒಂದು ಏಕಾದಶಮುಖಿಯು ಸಿಕ್ಕಿದೆ. ಗೋಲಾಕಾರದ ಏಕಮುಹಿಯು ಕೋಟಿಗಟ್ಟಲೆ ರುದ್ರಾಕ್ಷಿಗಳಲ್ಲಿ ಸಿಗುವುದು ಕಷ್ಟ. ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ ನಿಜವಾದ ಏಕಮುಖ ರುದ್ರಾಕ್ಷಿ ಇಷ್ಟರವರೆಗೆ ದೊರಕಲಿಲ್ಲ ಎನ್ನುವ ಹೇಳಿಕೆ ಇದೆ. ಆದುದರಿಂದ ಇದಕ್ಕೆ ಬೆಲೆ ಕಟ್ಟಲು ಅಸಾಧ್ಯ. ಲಕ್ಷಗಟ್ಟಲೆ ರೂಪಾಯಿಗೂ ದುರ್ಲಭ. ಆದರೆ ಮಾರುಕಟ್ಟೆಯಲ್ಲಿ ರುದ್ರಾಕ್ಷಿ ಹೊರ ಮೈ ರಚನೆಯನ್ನು ಹೋಲುವ ಅರ್ಧ ಚಂದ್ರಾಕಾರದ (ಕಿತ್ತಳೆ ಹಣ್ಣಿನ ಸೊಳೆಯಂತಿರುವ) ಏಕಮುಖಿ, ದ್ವಿಮುಖಿ ರುದ್ರಾಕ್ಷಿ ಗಳು ಕಡಿಮೆ ಬೆಲೆ, ಸುಮಾರು ರೂ. 300ರಿಂದ ರೂ. 500 ರ ಬೆಲೆಯಲ್ಲಿ ದೊರೆಯುತ್ತವೆ. ಇದು ರಾಮೇಶ್ವರ, ದಕ್ಷಿಣ ಭಾರತದ ಕೆಲವು ಕಡೆ ಮತ್ತು ಇಂಡೋನೇಷ್ಯಾ ಗಳಲ್ಲಿ ಬೆಳೆಯುತ್ತವೆ. ಇದಕ್ಕೆ ಚಂದ್ರಮುಖಿಯೆಂದು ಹೆಸರು. ಇಂಥ ಚಂದ್ರಮುಖಿ ರುದ್ರಾಕ್ಷಿ ಧಾರಣೆಯಿಂದಲೂ ಹಲವು ಉತ್ತಮ ಫಲ ದೊರೆಯುವುದು. ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ? ಅಪೂರ್ವ, ಚಿತ್ರ
ಸಾಮಾನ್ಯ ರುದ್ರಾಕ್ಷಿ ಹೊರಮೈಯಲ್ಲಿ ಆನೆ ಸೊಂಡಿಲಿನಂಥ ವಿಶೇಷ ರಚನೆ ಇದ್ದರೆ ಅದಕ್ಕೆ ಗಣೇಶ ರುದ್ರಾಕ್ಷಿ ಎನ್ನುತ್ತಾರೆ. ಹಾಗೆಯೇ ರುದ್ರಾಕ್ಷಿಗಳು ಪ್ರಾಕೃತಿಕವಾಗಿ ಸೇರಿಕೊಂಡಿದ್ದರೆ ಗೌರೀಶಂಕರ ರುದ್ರಾಕ್ಷಿ, ಮೂರು ರುದ್ರಾಕ್ಷಿಗಳು ಸೇರಿಕೊಂಡಿದ್ದರೆ ತ್ರಿಜುತಿ ಎಂದು ಕರೆಯುತ್ತಾರೆ. ಲೇಖಕರ ಮನೆಯಲ್ಲಿರುವ ಎರಡು ರುದ್ರಾಕ್ಷಿ ಮರಗಳಲ್ಲಿ ಬಿಡುತ್ತಿರುವ ಸಾವಿರಾರು ರುದ್ರಾಕ್ಷಿಯಲ್ಲಿ ಒಂದು ಗಣೇಶ ರುದ್ರಾಕ್ಷಿ ಮತ್ತು ಒಂದು ಏಕಾದಶ ರುದ್ರಾಕ್ಷಿಗಳು ಮಾತ್ರ ಸಿಕ್ಕಿವೆ. ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details ಮುಂದುವರಿಯುವುದು…
(ಮುಂದಿನ ಭಾಗದಲ್ಲಿ: ರುದ್ರಾಕ್ಷಿ ಪ್ರಭೇದಗಳು)