ಆಗ್ರಾ : ನಂಬಿದ್ರೆ ನಂಬಿ, ಬಿಟ್ಟೆ ಬಿಡಿ – ಉತ್ತರ ಪ್ರದೇಶದ ಮಥುರಾದಲ್ಲಿನ ರೈತನೋರ್ವ ಪಡೆದ 1.50 ಲಕ್ಷ ರೂ. ಕೃಷಿ ಸಾಲದ ಬಾಕಿ ಮೊತ್ತದ ಮೇಲೆ 1 ಪೈಸೆ ಮನ್ನಾ ಮಾಡಲಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋವರ್ಧನ ತೆಹಶೀಲ್‌ನ ಅತೀ ಸಣ್ಣ ಹಿಡುವಳಿಯ ರೈತ ಛಿಡ್ಡಿ ಎಂಬಾತ ಕಿಸಾನ್ ಕ್ರೆಡಿಟ್ ಮೂಲಕ ಆರು ವರ್ಷಗಳ ಹಿಂದೆ 1.50 ಲಕ್ಷ ರೂ ಕೃಷಿ ಸಾಲ ಪಡೆದಿದ್ದ. ಆತನಿಗೆ ಕೇವಲ ಐದು ಭೀಗಾ ಜಮೀನಿತ್ತು.
ಛಿಡ್ಡಿ ಮಾಡಿದ್ದ ಕೃಷಿ ಸಾಲದ ಬಾಕಿ ಮೊತ್ತವನ್ನು ಮನ್ನಾ ಮಾಡುವ ಸರ್ಟಿಫಿಕೇಟನ್ನು ಆತನಿಗೆ ಜಿಲ್ಲಾ ಆಡಳಿತಾಧಿಕಾರಿಯವರು ನೀಡಿದರು. ಆ ಸರ್ಟಿಫಿಕೇಟ್ ಕೇವಲ 1 ಪೈಸೆ ಸಾಲ ಮನ್ನಾ ಮಾಡುವ ಸರ್ಟಿಫಿಕೇಟ್ ಆಗಿತ್ತು.
ರೈತ ಛಿಡ್ಡಿಗೆ ಒಂದು ಪೈಸೆ ಕೃಷಿ ಸಾಲ ಮನ್ನಾ ಮಾಡಿರುವ ಸರ್ಟಿಫಿಕೇಟ್ ಕಂಡು ಅತ್ಯಾಶ್ಚರ್ಯವಾಯಿತು; ಇದು ನಿಜವೋ, ಬ್ಯಾಂಕ್‌ನವರು ಮಾಡಿರುವ ತಪ್ಪೋ ಎಂದು ಅರಿಯದಾಯಿತು. ಆದರೆ 1 ಪೈಸೆ ಸಾಲ ಮನ್ನಾ ಆಗಿರುವುದು ನಿಜವೇ ಎಂದು ಗೊತ್ತಾದಾಗ “ಸರಕಾರ ನನ್ನಂತಹ ರೈತರನ್ನು ಈ ರೀತಿ ಅವಮಾನಿಸುತ್ತಿದೆ; ನಮ್ಮ ನಗೆಪಾಡಲು ಮಾಡುತ್ತಿದೆ’ ಎಂದು ಅನ್ನಿಸಿತು. ಆತನ ಈ ಮಾತುಗಳನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಛಿಡ್ಡಿ ಹೇಳಿರುವ ಪ್ರಕಾರ “ಸರಕಾರ ಮತ್ತು ಅದರ ಅಧಿಕಾರಿಗಳಿಗೆ ಲಂಚ ಕೊಡದ ನನ್ನಂತಹ ರೈತರಿಗೆ ಮಾತ್ರವೇ ಈ ರೀತಿಯಾಗಿದೆ’.
ಮಥುರಾ ಜಿಲ್ಲಾಧಿಕಾರಿ ಅರವಿಂದ ಮಲ್ಲಪ್ಪ ಅವರ ಪ್ರಕಾರ “ಇದು ಹೀಗಾಗಿರುವುದು ತಾಂತ್ರಿಕ ತೊಂದರೆಗಳಿಂದ ಮತ್ತು ಅವಳಿ ಖಾತೆ ಸಮಸ್ಯೆಯಿಂದ.