ಜಾತ್ರೆಯಲ್ಲಿ ಬಣ್ಣ ಬಣ್ಣದ ರೂಬಿಕ್ಸ್ ಕ್ಯೂಬ್ ಕಂಡು ಮರುಳಾಗದವರಿಲ್ಲ. ಅದನ್ನು ಪೀರ್ತಿ ಬಿಡಿಸದೇ ಹೋದರೂ ಪ್ರಯತ್ನಿಸುವುದರಲ್ಲಿಯೇ ಆನಂದ ಕಂಡುಕೊಂಡವರಿಗೇನು ಕಮ್ಮಿಯಿಲ್ಲ. ಆದರೆ ರೂಬಿಕ್ಸ್ ಕ್ಯೂಬ್ ಪಜಲ್ ಅನ್ನು ಬಿಡಿಸಬಲ್ಲವರು ನೀವಾದರೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿ. ಫನ್‌ಸ್ಕೂಲ್ ಮತ್ತು ಲ್ಯಾಂಡ್‌ಮಾರ್ಕ್ ಆಶ್ರಯದಲ್ಲಿ ರೂಬಿಕ್ಸ್ ಕ್ಯೂಬ್ ಪಂದ್ಯಾವಳಿ ನಗರದಲ್ಲಿ ಆಯೋಜನೆಯಾಗಿದೆ. ಈ ಪಂದ್ಯಾವಳಿಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಯಾರು ಅತಿ ಕಡಿಮೆ ಸಮಯದಲ್ಲಿ ರೂಬಿಕ್ಸ್ ಕ್ಯೂಬನ್ನು ಬಿಡಿಸುವರೋ ಅವರು ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ. ಮೊದಲಿಗೆ ಎಲಿಮಿನೇಷನ್ ಸುತ್ತು ಇರುತ್ತದೆ.
ಎಲ್ಲಿ?: ಲ್ಯಾಂಡ್‌ಮಾರ್ಕ್ ಮಳಿಗೆ, ಫೋರಂ ಮಾಲ್, ಕೋರಮಂಗಲ
ಲ್ಯಾಂಡ್‌ಮಾರ್ಕ್ ಮಳಿಗೆ, ಒರಾಯನ್ ಮಾಲ್, ರಾಜಾಜಿನಗರ
ಯಾವಾಗ?: ಮೇ 19- 20, ಮೇ 25- 27, ಸಂಜೆ 4- ರಾತ್ರಿ 8.30