Advertisement

ಅಪಹರಣಕಾರರನ್ನು ಗುರುತಿಸಿದ ರುಬೈಯ್ಯಾ ಸಯೀದ್‌

11:09 PM Jul 15, 2022 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರ ಕಿರಿಯ ಸಹೋದರಿ ರುಬೈಯ್ಯಾ ಸಯೀದ್‌ ಅವರು, ದಶಕಗಳ ಹಿಂದೆ ತಮ್ಮನ್ನು ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿರ್‌ ಮಲಿಕ್‌ ಹಾಗೂ ಆತನ ಸಹಚರರೇ ಅಪಹರಿಸಿದ್ದು, ಅವರನ್ನು ತಾನು ನಿಖರವಾಗಿ ಗುರುತಿಸಿರುವುದಾಗಿ ಜಮ್ಮುವಿನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

Advertisement

1989ರಲ್ಲಿ ನಡೆದಿದ್ದ ರುಬೈಯ್ಯಾ ಅವರನ್ನು ಅಪಹರಿಸಿದ್ದ ಉಗ್ರರು, ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕಾದರೆ ಜಮ್ಮುವಿನ ಜೈಲಿನಲ್ಲಿದ್ದ ನಾಲ್ವರು ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಅಂದಿನ ಸಿಎಂ ಮುಫ್ತಿ ಮೊಹ ಮ್ಮದ್‌ ಸಯೀದ್‌ರವರಿಗೆ ಬೆದರಿಕೆ ಹಾಕಲಾಗಿತ್ತು.

ಆ ಹಿನ್ನೆಲೆಯಲ್ಲಿ, ನಾಲ್ವರು ಉಗ್ರರನ್ನು ಬಿಡುಗಡೆಗೊಳಿಸಿ, ರುಬೈಯ್ಯಾ ಸಯೀದ್‌ರನ್ನು ಕರೆತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next