Advertisement
ಬಿಬಿಎಂಪಿ ಸಹಾಯಕ ಎಂಜಿನಿಯರ್ ಆಗಿರುವ ದೂರುದಾರ ಮಹಿಳೆ, ಕಳೆದ ಒಂದೂವರೆ ವರ್ಷಗಳಿಂದ ಗಿರಿನಗರ ಉಪ ವಿಭಾಗದ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಆರ್ ಟಿಐ ಕಾರ್ಯಕರ್ತ ಹಾಗೂ ಪತ್ರಿಕೆ ಯೊಂದರ ವರದಿ ಗಾರ ಎಂದು ಹೇಳಿಕೊಂಡು ನಿತ್ಯ ಕಚೇರಿಗೆ ಬರುತ್ತಿದ್ದ ಕೃಷ್ಣಮೂರ್ತಿ ಸಂಬಂಧವಿಲ್ಲದ ಮಾಹಿತಿಗಳನ್ನು ಕೇಳುತ್ತಿದ್ದ. ಆರ್.ಟಿ.ಐ ಕಾರ್ಯಕರ್ತ ಎಂದು ಗೌರವ ನೀಡಿ ಆತ ಕೇಳುತ್ತಿದ್ದ ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ. ಆದರೂ ಕೃಷ್ಣಮೂರ್ತಿ ಆಗಾಗ ಕಚೇರಿಗೆ ಯಾವುದಾದರೂ ವಿಷಯ ತೆಗೆದು ತೊಂದರೆ ಕೊಡುತ್ತಿದ್ದ. ಕಚೇರಿ ಕೆಲಸದ ಮೇಲೆ ಹೊರಗೆ ಹೋದಾಗ ನನ್ನನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ಕೊಡುತ್ತಿದ್ದ. ಡಿ.18ರಂದು ಸಂಜೆ ಕನ್ಸಲ್ಟೆಂಟ್ ರುದ್ರೇಶ್ ನನ್ನ ಕ್ಯಾಬಿನ್ ಗೆ ಬಂದು ಕೆಲಸದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆ ವೇಳೆ ಆರೋಪಿ ಕೃಷ್ಣಮೂರ್ತಿ ಏಕಾಏಕಿ ನನ್ನ ಕ್ಯಾಬಿನ್ ಗೆ ನುಗ್ಗಿ ಇಬ್ಬರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಹಾಗೂ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿ ಸಲಾಗಿದೆ ಎಂದು ಪೊಲೀಸರು ಹೇಳಿದರು. Advertisement
ಸರ್ಕಾರಿ ಕೆಲಸಕ್ಕೆ ಅಡ್ಡಿ ಆರ್‌ಟಿಐ ಕಾರ್ಯಕರ್ತ ಬಂಧನ
11:29 AM Dec 21, 2021 | Team Udayavani |