Advertisement
ಪ್ರಸಕ್ತ ಶೈಕ್ಷಣಿಕ ವರ್ಷ ಕೊರೊನಾ ಸೋಂಕು ಹೆಚ್ಚಳ ಮಕ್ಕಳ ದಾಖಲಾತಿ ಮೇಲೆಯೂ ಪರಿಣಾಮ ಬೀರಿದ್ದು, ಸುಮಾರು ಶೇ. 25ರಿಂದ 30ರಷ್ಟು ಮಕ್ಕಳು ದಾಖಲಾಗಿಲ್ಲ. ಇದು ಮುಂದಿನ ವರ್ಷದ ಆರ್‌ಟಿಇ ಸೀಟಿನ ಮೇಲೂ ಪರಿಣಾಮ ಬೀರಲಿದೆ. ಯಾಕೆಂದರೆ ಪ್ರತೀ ಬಾರಿಯೂ ಹಿಂದಿನ ವರ್ಷದ ದಾಖಲಾತಿ ಆಧಾರದಲ್ಲಿ ಖಾಸಗಿ ಶಾಲೆಗಳಿಗೆ ಶೇ. 25ರಷ್ಟು ಆರ್‌ಟಿಇ ಸೀಟುಗಳನ್ನು ನಿಗದಿ ಮಾಡಲಾಗುತ್ತದೆ.
Related Articles
ಕಳೆದ ವರ್ಷ ಆರ್‌ಟಿಇ ಸೀಟು ಪಡೆಯಲು ಪೋಷಕರು ನಿರಾಸಕ್ತಿ ತೋರಿದ್ದು, ರಾಜ್ಯಾದ್ಯಂತ ಒಟ್ಟಾರೆ 14,042 ಸೀಟುಗಳಲ್ಲಿ ಕೇವಲ 3,063ಕ್ಕಷ್ಟೇ ಮಕ್ಕಳು ದಾಖಲಾಗಿದ್ದರು. ಹೀಗಾಗಿ ಮುಂದಿನ ವರ್ಷದ ಸೀಟು ಹಂಚಿಕೆ ಸಂಖ್ಯೆ 14 ಸಾವಿರಕ್ಕಿಂತ ಕಡಿಮೆಯಾಗಬಹುದು ಎಂದು ತಿಳಿದುಬಂದಿದೆ. 2022-23ನೇ ಸಾಲಿನ ಸೀಟು ಗಾಗಿ ಅರ್ಜಿ ಸಲ್ಲಿಸಲು ಫೆ. 3ರಿಂದ ಮಾ. 3ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಫೆ. 1ರಂದು ಈ ಬಾರಿ ಲಭ್ಯವಿರುವ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳು ಮತ್ತು ಶಾಲೆಗಳ ವಿವರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಲಿದೆ.
Advertisement
ಖಾಸಗಿ ಶಾಲೆಗಳಲ್ಲಿ ಈ ವರ್ಷದ ದಾಖಲಾತಿ ಆಧಾರದಲ್ಲಿ ಮುಂದಿನ ವರ್ಷದ ಶೇ. 25ರಷ್ಟು ಸೀಟು ನಿಗದಿ ಮಾಡಲಾಗುತ್ತದೆ. ಈ ವರ್ಷ ದಾಖಲಾತಿ ಪ್ರಮಾಣ ಕೆಲವೆಡೆ ಕುಸಿದಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಮುಂದಿನ ವರ್ಷದ ಆರ್‌ಟಿಇ ಸೀಟು ಸಂಖ್ಯೆ ಸ್ವಲ್ಪ ಕಡಿಮೆಯಾಗಬಹುದು.– ಪ್ರಸನ್ನಕುಮಾರ್,
ಪ್ರಾಥಮಿಕ ಶಿಕ್ಷಣ ನಿರ್ದೇಶಕರು