ಬೆಂಗಳೂರು: ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆರ್‌ಎಸ್‌ಎಸ್ ಕಾರ್ಯರ್ತರ ಸೋಗಿನಲ್ಲಿ ಅಪಹರಿಸಿದ ಮಾಂಸದ ಅಂಗಡಿ ಮಾಲೀಕನ ಸಂಚು ಬೆಳಕಿಗೆ ಬಂದಿದೆ.
ಅಂಗಡಿ ಮಾಲೀಕ ಮೊಹಮ್ಮದ್, ಮಧು, ದಿನೇಶ್, ಕಾರ್ತಿಕ್ ಬಂಧಿತರು.
ಸೆ.10ರಂದು ಜಾವೀದ್ ಮಹಮದ್ ಗಾಡಿಯಲ್ಲಿ ಗೋಮಾಂಸ ತುಂಬಿಕೊಂಡು ರಾಮನಗರ ದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತಿದ್ದ. ಮೈಕೋ ಲೇಔಟ್ ಸಿಗ್ನಲ್ ಬಳಿ ಜಾವೀದ್‌ನನ್ನು ಆರೊಪಿಗಳಾದ ಮಧು, ದಿನೇಶ್, ಕಾರ್ತಿಕ್ ಅಡ್ಡಗಟ್ಟಿದ್ದರು. ನಾವು ಆರ್ ಎಸ್‌ಎಸ್ ಕಾರ್ಯಕರ್ತರು ಎಂದು ಹೇಳಿ ಬೆದರಿಸಿದ್ದರು. ಬಳಿಕ ಗಾಡಿ ಸಮೇತ ಜಾವೀದ್‌ನನ್ನು ಅಪಹರಿಸಿದ್ದರು. ನಂತರ ಆರೋಪಿಗಳ ಪೈಕಿ ಇಬ್ಬರು ತಮ್ಮ ವಾಹನದಲ್ಲೇ ಜಾವೀದ್‌ನನ್ನು ಬೇರೆಡೆ ಕರೆದೊಯ್ದು ಗಾಡಿ ಬಿಟ್ಟು ಕೊಡಲು 1 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಕೊನೆಗೆ 10 ಸಾವಿರ ರೂ. ಪಡೆದು ಜಾವೀದ್‌ನನ್ನು ಬಿಟ್ಟು ಕಳುಹಿಸಿದ್ದರು.
ಸೆಂಟ್‌ಜಾನ್ ಸಿಗ್ನಲ್ ಬಳಿ ಗಾಡಿ ಇದೆ ತಗೆದುಕೋ ಎಂದು ಹೇಳಿದ್ದರು. ಅದರಂತೆ ಜಾವೀದ್ ತನ್ನ ವಾಹನದ ಬಳಿ ಹೊದಾಗ ಅದರಲ್ಲಿದ್ದ ಗೋಮಾಂಸ ಇರಲಿಲ್ಲ. ಜಾವೀದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ತನಿಖೆ ನಡೆಸಿದ ಆಡುಗೋಡಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಗೋಮಾಂಸ ಕಳ್ಳತನ ಮಾಡಿಸಿರುವುದು ಅಂಗಡಿ ಮಾಲೀಕ ಮಹಮದ್ ಎಂಬ ಸಂಗತಿ ಬಯಲಿಗೆ ಬಂದಿದೆ.
ಜಾವೀದ್ ಡಿಲಿವರಿ ಮಾಡಲು ಹೊರಟಿದ್ದ ಗೋಮಾಂಸದ ಅಂಗಡಿಯ ಮಾಲೀಕ ಮೊಹಮ್ಮದ್ ತನ್ನ ಆಪ್ತರಾದ ದಿನೇಶ್, ಕಾರ್ತಿಕ್, ಮಧು ಮೂಲಕ ಅಪ ಹರಣ ಮಾಡಿಸಿದ್ದ. ಗಾಡಿಯಲ್ಲಿದ್ದ ದನದ ಮಾಂಸವನ್ನು ತನ್ನ ಅಂಗಡಿಗೆ ತರಿಸಿಕೊಂಡು ಖಾಲಿ ಗಾಡಿಯನ್ನು ಸೆಂಟ್ ಜಾನ್ಸ್ ಸಿಗ್ನಲ್ ಬಳಿ ಇಟ್ಟಿದ್ದ. ನಂತರ ಮಾಂಸ ಡೆಲವರಿಯಾಗಲಿಲ್ಲ ಎಂದು ಸುಳ್ಳು ಹೇಳಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.