Advertisement

ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಪರಮೇಶ್ವರನ್‌ ನಿಧನ

10:06 AM Feb 10, 2020 | sudhir |

ಕೊಚ್ಚಿ: ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ, ಭಾರತೀಯ ಜನ ಸಂಘದ ಮಾಜಿ ನಾಯಕ ಪಿ.ಪರಮೇಶ್ವರನ್‌(93) ಅವರು ಭಾನು ವಾರ ಬೆಳಗ್ಗೆ ನಿಧನರಾದರು. ಭಾರತೀಯ ವಿಚಾರ ಕೇಂದ್ರಂನ ಸಂಸ್ಥಾಪಕ ನಿರ್ದೇಶಕರೂ ಆದ ಪರಮೇಶ್ವರನ್‌, ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಓಟ್ಟಪ್ಪಾಳಯಂನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು.

Advertisement

ಜನಸಂಘದಲ್ಲಿ ಸಕ್ರಿಯರಾಗಿದ್ದ ಅವರು ದೀನದಯಾಳ್‌ ಉಪಾಧ್ಯಾಯ, ವಾಜಪೇಯಿ, ಎಲ್‌.ಕೆ.ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ್ದರು. ಇವರಿಗೆ 2004ರಲ್ಲಿ ಪದ್ಮಶ್ರೀ, 2018ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸ ಲಾಗಿತ್ತು.

ಬರಹಗಾರ, ಕವಿ, ಸಂಶೋ ಧಕ ಹಾಗೂ ಪಕ್ಕಾ ಆರ್‌ಎಸ್‌ಎಸ್‌ ವಿಚಾರವಾದಿ ಆಗಿದ್ದ ಪರಮೇಶ್ವರನ್‌, ಭಾರತೀಯ ಜನ ಸಂಘದ ಕಾರ್ಯದರ್ಶಿ ಆಗಿ, ಉಪಾಧ್ಯಕ್ಷರಾಗಿ, ದೀನದಯಾಳ್‌ ಸಂಶೋಧನ ಸಂಸ್ಥೆ ನಿರ್ದೇಶಕರಾಗಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 16 ತಿಂಗಳು ಜೈಲುವಾಸ ಅನುಭವಿಸಿದ್ದ ಇವರು, 1982ರಲ್ಲಿ ಭಾರತೀಯ ವಿಚಾರ ಕೇಂದ್ರಂ ಸ್ಥಾಪಿಸಿ ಕೇರಳದಲ್ಲಿ ರಾಷ್ಟ್ರೀಯವಾದದ ವಿಚಾರವನ್ನು ಪ್ರಚಾರ ಮಾಡುತ್ತಿದ್ದರು. ಕೊಚ್ಚಿ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಟ್ಟು, ಸಂಜೆ ಅವರ ಹುಟ್ಟೂರಾದ ಆಳಪ್ಪುಳ ಜಿಲ್ಲೆಯ ಮುಹಮ್ಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಪಿಣರಾಯಿ ವಿಜಯನ್‌ ಸೇರಿ ಪ್ರಮುಖ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next