Advertisement

Caste Census ಆರೆಸ್ಸೆಸ್‌ ಸಮ್ಮತಿಯಿದೆ, ಆದರೆ…ರಾಜಕೀಯ ಲಾಭಕ್ಕೆ ಗಣತಿ ಮಾಹಿತಿ ಬಳಕೆ ಬೇಡ

12:34 AM Sep 03, 2024 | Team Udayavani |

ಪಾಲಕ್ಕಾಡ್‌: ದೇಶಾದ್ಯಂತ ಜಾತಿಗಣತಿ ನಡೆಸಬೇಕೆಂದು ಕಾಂಗ್ರೆಸ್‌ ಸಹಿತ ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟವು ಆಗ್ರಹಿಸುತ್ತಿರುವಂತೆಯೇ ಆರೆಸ್ಸೆಸ್‌ ಕೂಡ ಬೆಂಬಲ ನೀಡಿದೆ. “ಜಾತಿಗಣತಿ ನಡೆಸಲು ನಮ್ಮ ಸಮ್ಮತಿ ಇದೆ. ಆದರೆ ಗಣತಿಯ ದತ್ತಾಂಶಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸಬೇಕೇ ವಿನಾ ಚುನಾವಣೆ ಮತ್ತು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡ ಬಾರದು’ ಎಂದು ಆರೆಸ್ಸೆಸ್‌ ಹೇಳಿದೆ.

Advertisement

ಕೇರಳದ ಪಾಲಕ್ಕಾಡ್‌ನ‌ಲ್ಲಿ ನಡೆದ 3 ದಿನಗಳ ಸಮನ್ವಯ ಬೈಠಕ್‌ನ ಮುಕ್ತಾಯದ ಬಳಿಕ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಆರೆಸ್ಸೆಸ್‌ ವಕ್ತಾರ ಸುನಿಲ್‌ ಅಂಬೇಕರ್‌ ಈ ವಿಷಯ ತಿಳಿಸಿದ್ದಾರೆ.

ಹಿಂದೂ ಸಮಾಜದಲ್ಲಿ ಜಾತಿ ಹಾಗೂ ಜಾತೀಯ ಸಂಬಂಧ ಸೂಕ್ಷ್ಮ ವಿಷಯವಾಗಿದೆ. ಅಲ್ಲದೆ ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ವಿಚಾರಕ್ಕೆ ಬಂದರೂ ಇದು ಮಹತ್ವದ ಸಂಗತಿಯಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವು ಸಮುದಾಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾದ ಅಗತ್ಯವಿದೆ. ಅದು ಸಾಧ್ಯವಾಗಬೇಕೆಂದರೆ ಸರಕಾರದ ಬಳಿಕ ತಾಜಾ ಅಂಕಿಅಂಶ ಇರಬೇಕಾಗುತ್ತದೆ. ಹೀಗಾಗಿ ಜಾತಿಗಣತಿ ನಡೆಸುವುದಕ್ಕೆ ಸಹಮತವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next