ಹೊಸದಿಲ್ಲಿ: ದೇಶದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಯನ್ನು ಸಮರ್ಥವಾಗಿ ನೀಗಲು, ಭಾರತ ಕೇಂದ್ರೀಕೃತ ಆರ್ಥಿಕ ಸಿದ್ಧ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಸಮಿತಿಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಒತ್ತಾಯಿಸಿದೆ.
ರವಿವಾರದಂದು ಅಹ್ಮದಾಬಾದ್‌ನ ಪಿರಾಣಾದಲ್ಲಿ ಮುಕ್ತಾಯಗೊಂಡ ಎಬಿಪಿಎಸ್‌ನ ಮೂರು ದಿನಗಳ ಸಮ್ಮೇಳನದ ಕಡೆಯ ದಿನದಂದು ಈ ಕುರಿತಂತೆ ಮಂಡಿಸಲಾಗಿದ್ದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ನಿರ್ಣಯಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶ, ಅಸಂಘಟಿತ ವಲಯಗಳಲ್ಲಿ ಉದ್ಯೋಗವಕಾಶ, ಮಹಿಳೆಯರಿಗೆ ಮತ್ತಷ್ಟು ಉದ್ಯೋಗವಕಾಶ ಹಾಗೂ ಸಮಗ್ರ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಉತ್ತೇಜಿಸಬೇಕು. ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡಬೇಕು ಹಾಗೂ ಸಾಮಾ ಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ನಿಗದಿತ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಬೇಕು ಎಂದು ನಿರ್ಣಯಗಳಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಏರ್ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಗ್ರೂಪ್ ಮುಖ್ಯಸ್ಥ ಎನ್. ಚಂದ್ರಶೇಖರನ್ ನೇಮಕ
ಜತೆಗೆ ಸೂಕ್ತ ಜನರನ್ನು ಪ್ರೋತ್ಸಾಹಿಸುವ ಮೂಲಕ ಉದ್ಯಮಶೀಲತೆಯನ್ನು ಪೋಷಿ ಸಬೇಕು. ಕೇವಲ ಕೆಲಸ ಮಾಡುವ ಮನಃಸ್ಥಿತಿಯಿಂದ ಯುವಜನರನ್ನು ಹೊರಗೆ ತಂದು ಅವರಲ್ಲಿ ಇತರರಿಗೆ ಕೆಲಸ ಕೊಟ್ಟು ತಾವೂ ಕೆಲಸ ಮಾಡುವಂಥ ಮನಃಸ್ಥಿತಿಯನ್ನು ಬೆಳೆಸಬೇಕು. ಜತೆಗೆ ವಿಕೇಂದ್ರೀ ಕರಣದತ್ತ ಆರ್ಥಿಕಾಭಿವೃದ್ಧಿಗೂ ಒತ್ತು ನೀಡಬೇಕು ಎಂದು ಹೇಳಲಾಗಿದೆ.