Advertisement

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

12:15 AM Nov 25, 2024 | Team Udayavani |

ಕೊಪ್ಪಳ: ಸ್ವಾತಂತ್ರ್ಯ ದೊರೆತ ಬಳಿಕ 90ರ ದಶಕದಲ್ಲಿ ಜಾಗತೀಕರಣ ಹಾಗೂ ಕೋಮುವಾದೀಕರಣ ಆರಂಭವಾಯಿತು. ಆ ಕಾಲಘಟ್ಟದಲ್ಲೇ ಆರೆಸ್ಸೆಸ್‌ ಕಾರ್ಯಾರಂಭವಾಯಿತು ಎಂದು ಕನ್ನಡ ಅಭಿವೃದ್ಧಿ ಪ್ರಾ ಧಿ ಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

Advertisement

ರವಿವಾರ ನಗರದ ಸರಕಾರಿ ನೌಕರರ ಭವನದಲ್ಲಿ ಕವಿ ಗವಿಸಿದ್ದ ಎನ್‌. ಬಳ್ಳಾರಿ ವೇದಿಕೆಯಿಂದ ನಡೆದ ಸಾಹಿತ್ಯೋತ್ಸವದಲ್ಲಿ ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಆರೆಸ್ಸೆಸ್‌ ಹೆಸರು ಪ್ರಸ್ತಾವಿಸಿದರು. ಇದಕ್ಕೆ ಸಭಾಸದರೊಬ್ಬರು ಆಕ್ಷೇಪಿಸಿ ಅದರ ಬಗ್ಗೆ ಮಾತನಾಡಬೇಡಿ ಎಂದರು. ಇನ್ನೊಬ್ಬ ವ್ಯಕ್ತಿ ಆರೆಸ್ಸೆಸ್‌ ಬಗ್ಗೆ ಚರ್ಚೆ ಮಾಡುವ ವೇದಿಕೆ ಇದಲ್ಲ ಎಂದರು.

ಆಗ ವೇದಿಕೆ ಮೇಲಿದ್ದ ಕವಿ ಮಹೇಶ ಬಳ್ಳಾರಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಗವಿಸಿದ್ದಪ್ಪ ಕೊಪ್ಪಳ ಕೆಳಗಿಳಿದು ಬಂದು ನಿಮಗೆ ಇಷ್ಟವಿದ್ದರೆ ಕೇಳಿ ಇಲ್ಲದಿದ್ದರೆ ನಿರ್ಗಮಿಸಿ ಎಂದರು. ಆಗ ಸ್ವಲ್ಪ ಕಾಲ ಗೊಂದಲ ನೆಲೆಸಿತು. ಬಳಿಕ ಇಬ್ಬರು ವ್ಯಕ್ತಿಗಳು ಕಾರ್ಯಕ್ರಮದಿಂದ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next