Advertisement

RSS, ಪ್ರಧಾನಿ ಬೆಂಬಲಿತ ಕಾಶ್ಮೀರಿ ಸಂತನಿಗೆ ಉಗ್ರ ಬೆದರಿಕೆ

12:48 AM Nov 10, 2024 | Team Udayavani |

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಬೆಂಬಲಿಸಿದ್ದಕ್ಕಾಗಿ ಜಮ್ಮು ಕಾಶ್ಮೀರದ ಹಿಂದೂ ಸಂತರೊಬ್ಬರಿಗೆ ಉಗ್ರರು ಜೀವ ಬೆದರಿಕೆ ಒಡ್ಡಿದ್ದಾರೆ. ನ.7­ರಂದು ಸಂತ ಸಾಹಿಲ್‌ ಜೀ ಮಹರಾಜ್‌ ಅವರಿಗೆ ವೀಡಿಯೋ ಕಾಲ್‌ ಮಾಡಿರುವ ಉಗ್ರರು, “ನಾವು ನಿಮಗೆ ತುಂಬಾ ಸಮೀಪದಲ್ಲೇ ಇದ್ದೇವೆ. ಕಣಿವೆ ರಾಜ್ಯದಲ್ಲಿ ಪ್ರಧಾನಿ ಮತ್ತು ಆರ್‌ಎಸ್‌ಎಸ್‌ಗೆ ನೀವು ಬೆಂಬಲ ಸೂಚಿಸುವುದನ್ನು ಮುಂದು­ವರಿಸಿದಲ್ಲಿ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next