Advertisement

ಆರ್‌ಎಸ್‌ಎಸ್‌ ಬಲವೂ ಅಲ್ಲ, ಎಡವೂ ಅಲ್ಲ : ಹೊಸಬಾಳೆ

09:05 PM Feb 02, 2023 | Team Udayavani |

ಜೈಪುರ : ಆರ್‌ಎಸ್‌ಎಸ್‌ ಬಲಪಂಥವೂ ಅಲ್ಲ, ಎಡ ಪಂಥವೂ ಅಲ್ಲ. ನಮ್ಮದು ರಾಷ್ಟ್ರೀಯ ಪಂಥ. ರಾಜಕೀಯದ ಒಲವಿಲ್ಲದೆ,  ರಾಷ್ಟ್ರ ಹಿತಕ್ಕಾಗಿ ಮಾತ್ರ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Advertisement

ದೇಶದಲ್ಲಿರುವ ಜನರ ಆಚರಣೆಗಳೂ ವಿಭಿನ್ನವಾಗಿದ್ದರೂ, ಅವರೆಲ್ಲರ ಪೂರ್ವಜರು ಹಿಂದೂಗಳೇ ಹಾಗಾಗಿ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಲವಂತದಿಂದ ಗೋಮಾಂಸ ತಿಂದವರನ್ನು ಹಿಂದೂಗಳಲ್ಲ ಎಂದು ಹೇಳಿ ಅವರನ್ನು ತಿರಸ್ಕರಿಸಲು ಸಾಧ್ಯವಿಲ್ಲ.  ಅವರೆಲ್ಲರೂ ಭಾರತದವರು. ಯಾರ ಪೂರ್ವಜರು ಭಾರತೀಯರೋ ಅವರೆಲ್ಲರೂ ಹಿಂದೂಗಳೇ ಎಂದರು.

ಆರ್‌ಎಸ್‌ಎಸ್‌ ಒಂದು ರಾಷ್ಟೀಯವಾದಿ ಸಂಘಟನೆ, ರಾಷ್ಟ್ರ ಹಿತಕ್ಕಾಗಿಯಷ್ಟೇ ಶ್ರಮಿಸುವ ಸಂಘಟನೆ. ಸಂಘಟಿತ ಪ್ರಯತ್ನದಿಂದ ಅಷ್ಟೇ ಭಾರತ ವಿಶ್ವಗುರುವಾಗಿ, ಜಗತ್ತನ್ನು ಮುನ್ನಡೆಸಲು ಸಾಧ್ಯ. ಸಂಘ ದೇಶದ ಎಲ್ಲ ಧರ್ಮ, ಪಂಗಡಗಳನ್ನು ಒಂದೇ ಎಂದು ಪರಿಗಣಿಸುತ್ತದೆ ಎಂದು ಹೊಸಬಾಳೆ ತಿಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next