Advertisement

ಆರೆಸ್ಸೆಸ್‌ ಬೈಠಕ್‌ನಲ್ಲಿ ಗೌರಿ ಲಂಕೇಶ್‌ಗೆ ಶ್ರದ್ಧಾಂಜಲಿ

09:58 AM Oct 13, 2017 | |

ಭೋಪಾಲ: ಭೋಪಾಲದಲ್ಲಿ ಗುರುವಾರ ಆರಂಭಗೊಂಡ ಆರೆಸ್ಸೆಸ್‌ನ ಮೂರು ದಿನಗಳ ಅ.ಭಾ. ಕಾರ್ಯಕಾರಿ ಮಂಡಲ ಬೈಠಕ್‌ನಲ್ಲಿ ಒಂದು ವರ್ಷದಲ್ಲಿ ನಿಧನ ಹೊಂದಿದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌, ಹಿರಿಯ ವಿಜ್ಞಾನಿ ಡಾ| ಯು.ಆರ್‌. ರಾವ್‌, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌, ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಆರೆಸ್ಸೆಸ್‌ನ ಹಿರಿಯ ಮುಂದಾಳು ಜನಾರ್ದನ ಉಪ್ಪಳ, ರಾಷ್ಟ್ರಸೇವಿಕಾ ಸಮಿತಿಯ ಶಾರದಾ ಘಾಟೆ ಮೊದಲಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿರುವ ಇವರಿಗೆಲ್ಲ ಶ್ರದ್ಧಾಂಜಲಿ ಸಲ್ಲಿಸಲಾ ಯಿತು ಎಂದು ಆರೆಸ್ಸೆಸ್‌ ಪ್ರಚಾರ ಪ್ರಮುಖರಾದ ಮನಮೋಹನ್‌ ವೈದ್ಯ ತಿಳಿಸಿದ್ದಾರೆ. ಭೋಪಾಲ್‌ನಲ್ಲಿ 3 ದಿನಗಳ ಕಾಲ ನಡೆಯಲಿರುವ ಆರೆಸ್ಸೆಸ್‌ನ ಅಖೀಲ ಭಾರತೀಯ ಕಾರ್ಯಕಾರಿಣಿ ಮಂಡಲ್‌ ಸಭೆ ಗುರುವಾರ ಆರಂಭವಾಗಿದೆ. ಇದೇ ವೇಳೆ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಪುತ್ರನ ವಿರುದ್ಧದ ಆರೋಪಗಳ ಬಗ್ಗೆ ಆರೆಸ್ಸೆಸ್‌ ಪ್ರತಿಕ್ರಿಯಿ ಸಿದ್ದು, ಆರೋಪ ಕುರಿತು ತನಿಖೆ ಮಾಡಬೇಕು. ಆದರೆ, ಆರೋಪಕ್ಕೆ ಸಂಬಂಧಿಸಿ ಸೂಕ್ತ ಸಾಕ್ಷ್ಯಾಧಾರ ಗಳೂ ಇರಬೇಕು ಎಂದಿದೆ.

ಇದೇ  ವೇಳೆ, “ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿ ದ್ದರೆ ಆ ಕುರಿತು ಪರಸ್ಪರ ಮಾತುಕತೆ, ಚರ್ಚೆ ನಡೆಸ ಬೇಕು. ಆದರೆ ಅದು ನಿಂದನೆಗೆ ದಾರಿಯಾಗ ಬಾರದು’ ಎಂದು ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next