Advertisement

ಲಿಂಗಸುಗೂರು: ಸ್ವಯಂ ಸೇವಕರ ಪಥಸಂಚಲನ

01:17 PM Oct 26, 2021 | Team Udayavani |

ಲಿಂಗಸುಗೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ನಡೆಯಿತು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಅಂಚೆ ಕಚೇರಿ, ಗೌಳಿಪುರ, ಗದ್ದೆಮ್ಮ ದೇವಿ ದೇವಸ್ಥಾನ, ಮುನ್ನೂರು ಓಣಿ ಗಡಿಯಾರ ವೃತ್ತ, ಚಾವೂಸ್‌ ಓಣಿ, ರಾಘವೇಂದ್ರ ಸ್ವಾಮಿಗಳ ಮಠ, ಬಸ್‌ ನಿಲ್ದಾಣ ವೃತ್ತ, ಬೈಪಾಸ್‌ ರಸ್ತೆ, ಸ್ವಾಮಿ ವಿವೇಕಾನಂದ ನಗರ ಮೂಲಕ ಹಾಯ್ದು ಕಾಲೇಜು ಮೈದಾನ ತಲುಪಿತು.

ಪಥ ಸಂಚಲನದಲ್ಲಿ ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿದ ಗಣವೇಷಧಾರಿ ಸ್ವಯಂ ಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಕಟ್ಟಡಗಳ ಮೇಲೆ ಭಗವಾಧ್ವಜ ರಾರಾಚಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನ ಸ್ವಾಗತಿಸಿದರು. ಶಿವಾಜಿ, ಸುಭಾಷಚಂದ್ರ ಭೋಸ್‌, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀ, ಒನಕೆ ಓಬವ್ವ, ಭಗತ್‌ಸಿಂಗ್‌, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರ ನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನ ಸ್ವಾಗತಿಸಿದರು.

ನಂತರ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಬಳ್ಳಾರಿ ವಿಭಾಗ ಪ್ರಮುಖ ನಾಗರಾಜ ಮಾತನಾಡಿದರು. ಪಥಸಂಚಲನದಲ್ಲಿ ಡಾ| ಪಾಂಡುರಂಗ ಆಪ್ಟೆ ಬಸವರಾಜ ಸ್ವಾಮಿ, ಸೋಮಶೇಖರ್‌ ನಾಯಕ, ಮಾಜಿ ಶಾಸಕ ಮಾನಪ್ಪ ವಜ್ಜಲ್‌, ಗಿರಿಮಲ್ಲನಗೌಡ ಕರಡಕಲ್‌, ಡಾ| ಶಿವಬಸಪ್ಪ, ವೀರನಗೌಡ ಲೆಕ್ಕಿಹಾಳ,‌ ಚೆನ್ನಬಸವ ಹಿರೇಮಠ, ಶಶಿಕಾಂತ ಗಸ್ತಿ, ಭೀಮಸೇನ್‌ ಕುಲಕರ್ಣಿ, ಅಯ್ಯಪ್ಪ, ಈಶ್ವರ,ಅಮರ, ಮನೋಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next