Advertisement

ದೇಶಕ್ಕಿಂದು ಆರ್‌ಎಸ್‌ಎಸ್‌ ಅನಿವಾರ್ಯ: ಅರವಿಂದರಾವ್‌ ದೇಶಪಾಂಡೆ

03:04 PM Oct 15, 2024 | Team Udayavani |

ಉದಯವಾಣಿ ಸಮಾಚಾರ
ತೆಲಸಂಗ: ಆರೆಸ್ಸೆಸ್‌ ಇಲ್ಲದಿದ್ದರೆ ಇಂದು ಕಲ್ಪಿಸಿಕೊಳ್ಳಲಾರದ ಸ್ಥಿತಿಯಲ್ಲಿ ಭಾರತ ಇರುತ್ತಿತ್ತು. ಇಂದು ದೇಶಕ್ಕೆ ಆರ್‌ಎಸ್‌ಎಸ್‌
ಅನಿವಾರ್ಯ ಎಂದು ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಪ್ರಮುಖ ಅರವಿಂದರಾವ್‌ ದೇಶಪಾಂಡೆ ಹೇಳಿದರು.

Advertisement

ಗ್ರಾಮದ ಬಿವಿವಿ ಸಂಘದ ಮೈದಾನದಲ್ಲಿ ಸ್ಥಳಿಯ ಆರೆಸ್ಸೆಸ್‌ ಶಾಖೆ ವತಿಯಿಂದ ಹಮ್ಮಿಕೊಂಡ ವಿಜಯದಶಮಿ ಉತ್ಸವ
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಜಾಗತಿಕ ವೇದಿಕೆಯಲ್ಲಿ ಭಾರತದ ಹೆಮ್ಮೆ ಬೆಳೆಯುತ್ತಿದೆ.

ಸಮಸ್ಯೆಗಳನ್ನು ನಿವಾರಿಸಲು ಜಗತ್ತು ಭಾರತದತ್ತ ನೋಡುತ್ತಿದೆ. ವಿಶ್ವಗುರು ಭಾರತ ಎಂದು ಜಗತ್ತು ಒಪ್ಪುತ್ತಿದೆ. ಇದಕ್ಕೆ
ಕಾರಣ ಆರೆಸ್ಸೆಸ್‌ನಿಂದ ಸಂಸ್ಕಾರ ಪಡೆದಂತಹ ವ್ಯಕ್ತಿ ಪ್ರಧಾನಿಯಾಗಿರುವುದು. ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಮೋದಿ
ಅವರು ಸ್ವಂತ ಹಿತಕ್ಕಿಂತ ದೇಶದ ಹಿತ ಮೊದಲು ಎಮದು ಆಡಳಿತ ನಡೆಸುತ್ತಿರುವ  ರೀತಿಯೇ ಆರ್‌ಎಸ್‌ಎಸ್‌ ನೀಡುವ
ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸಂಘ ಉದಯಿಸದೆ ಇದ್ದಿದ್ದರೆ ಬಾಂಗ್ಲಾ, ಪಾಕಿಸ್ಥಾನದಲ್ಲಿನ ಹಿಂದುಗಳ ಸ್ಥಿತಿ ಭಾರತಿಯ ಹಿಂದುಗಳೂ ಎದುರಾಗುತ್ತಿತ್ತು. ಆರ್‌.ಎಸ್‌. ಎಸ್‌ ವ್ಯಕ್ತಿ ನಿರ್ಮಾಣ ಒಂದನ್ನು ಬಿಟ್ಟು ಬೇರೇನು ಮಾಡುವುದಿಲ್ಲ. ಆದರೆ ಸಂಸ್ಕಾರ ಪಡೆದ ಸಂಘದ ಸ್ವಯಂಸೇವಕರು ಸುಮ್ಮನಿರುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿವಿಧ ಸಂಘಟನೆಗಳ ಮೂಲಕ ಸ್ವಯಂ ಸೇವಕರು ದೇಶದ, ಧರ್ಮದ ಕೆಲಸ ಮಾಡುತ್ತಿದ್ದಾರೆ ಎಂದರು.

ಒಬ್ಬ ಮತಾಂತರವಾದರೆ ಆತ ಹಿಂದು ವಿರೋಧಿ ಆಗುತ್ತಾನೆ. ಮತಾಂತರ ಇದು ರಾಷ್ಟ್ರಾಂತರವೂ ಹೌದು. ಕೇರಳದಲ್ಲಿ 11
ಸಾವಿರ ಕಾರ್ಯಕರ್ತರ ಕೊಲೆಯಾಗಿದೆ. ದೇಶದ ಉದ್ದಗಲಕ್ಕೂ ಸವಾಲುಗಳನ್ನು ಮೆಟ್ಟಿ ನಿಂತು ಸಂಘ ಹಿಂದುಗಳ ಮತ್ತು
ದೇಶದ ರಕ್ಷಣೆಯಲ್ಲಿ ತೊಡಗಿದೆ ಎಮದು ನುಡಿದರು.

Advertisement

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪಾ ಗಂಗಾಧರ ಮಾತನಾಡಿ,  ದೇಶಕ್ಕಾಗಿ ದುಡಿಯುವ ಸಂಘಟನೆ ಆರೆಸ್ಸೆಸ್‌, ವ್ಯಕ್ತಿತ್ವ ನಿರ್ಮಾಣಕ್ಕೆ ಇನ್ನೊಂದು ಹೆಸರು ಆರೆಸ್ಸೆಸ್‌. ದೇಶ, ಧರ್ಮ ಉಳಿದರೆ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು
ಸಾಧ್ಯ. ಹೀಗಾಗಿ ಭವ್ಯ ಭಾರತ ನಿರ್ಮಾಣದಲ್ಲಿ ಆರೆಸ್ಸೆಸ್‌ ಪಾತ್ರ ಹಿರಿದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next