Advertisement
ಹುಬ್ಬಳ್ಳಿ: ಕೋವಿಡ್ ಸಂಕಷ್ಟದಲ್ಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜನರ ನೆರವಿಗೆ ಧಾವಿಸಿದೆ. ಕೋವಿಡ್ ಕೇರ್ ಸೆಂಟರ್, ರಕ್ತ-ಪ್ಲಾಸ್ಮಾ ದಾನ ಶಿಬಿರ, ಆಹಾರಧಾನ್ಯ-ಊಟ ವಿತರಣೆ ಮೂಲಕ ಸಾರ್ಥಕ ಸೇವೆಯಲ್ಲಿ ತೊಡಗಿದೆ.
Related Articles
Advertisement
ರಕ್ತ-ಪ್ಲಾಸ್ಮಾ ದಾನ ಶಿಬಿರ: ಹುಬ್ಬಳ್ಳಿ, ಕಲಬುರಗಿ, ಸವದತ್ತಿ, ರಾಯಚೂರು, ಬಳ್ಳಾರಿ, ಚಿತ್ತಾಪುರ, ಯಾದಗಿರಿ, ಶಿಗ್ಗಾವಿ ಸೇರಿದಂತೆ ಉತ್ತರದ ವಿವಿಧ ಕಡೆ ರಕ್ತ-ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದ್ದು, ಸಾವಿರಾರು ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಆನ್‌ಲೈನ್ ಮೂಲಕ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ, ಹಳ್ಳಿ-ಹಳ್ಳಿಗಳಿಗೆ ತೆರಳಿ ಸ್ವಯಂ ಸೇವಕರು ಕರಪತ್ರ ಹಂಚಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಭಿಕ್ಷುಕರಿಗೆ ಊಟ ನೀಡಿದ್ದರೆ, ಬಳ್ಳಾರಿಯಲ್ಲಿ ಐಸೋಲೇಷನ್‌ನಲ್ಲಿದ್ದವರಿಗೆ ಊಟ-ಔಷ ಧ, ಬಳ್ಳಾರಿಯ ವಿಮ್ಸ್‌ನಲ್ಲಿ ಆರೋಗ್ಯ ಭಾರತಿಯಿಂದ ರೋಗಿಗಳಿಗೆ ವಾರಕ್ಕೆ ಮೂರು ದಿನ ಊಟ ನೀಡಿದರೆ, ಬೀದರನ ಬಿಮ್ಸ್‌ನಲ್ಲಿ ಸೋಂಕಿತರ ಸಂಬಂ ಧಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಚಹಾ-ಬಿಸ್ಕೆಟ್ ನೀಡಿಕೆ, ಬಳ್ಳಾರಿ, ಸಿರಗುಪ್ಪಾದಲ್ಲಿ 225 ಜನರಿಗೆ ಆಯುರ್ವೇದ ಔಷಧ ನೀಡಲಾಗಿದೆ. ಧಾರವಾಡದಲ್ಲಿ ಟೆಲಿ ಮೆಡಿಸನ್ ಸೇವೆ ಆರಂಭಿಸಿದ್ದರೆ, ಹುಬ್ಬಳ್ಳಿಯಲ್ಲಿ 40 ಜನ ಸ್ವಯಂ ಸೇವಕರು ಸರತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 17 ಜನ ಸ್ವಯಂ ಸೇವಕರ ತಂಡ ರಚಿಸಲಾಗಿದೆ. ಹುಬ್ಬಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಅಗ್ನಿಹೋತ್ರ ಕೈಗೊಳ್ಳಲಾಗುತ್ತಿದೆ. ವಿವಿಧ ಕಡೆ ಲಸಿಕೆ ಕೇಂದ್ರಗಳಲ್ಲಿ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.