Advertisement

ದೇಶ ಪ್ರಗತಿಗೆ ಕೇಸರಿ ಕೊಡುಗೆ ಅಪಾರ

01:27 AM Dec 30, 2020 | Team Udayavani |

ಕಲ್ಲಿಕೋಟೆ: ಹೊಸ ತಲೆಮಾರಿನವರು ಆರ್‌ಎಸ್‌ಎಸ್‌ ಬೆಳೆದು ಬಂದ ದಾರಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಅವರು ಕೇರಳದ ಕಲ್ಲಿಕೋಟೆಯ ಚಲಪ್ಪುರಂನಲ್ಲಿ “ಕೇಸರಿ ಮಾಧ್ಯಮ ಅಧ್ಯಯನ ಮತ್ತು ಸಂಶೋಧನ ಕೇಂದ್ರ’ ಉದ್ಘಾಟಿಸಿ ಮಾತನಾಡಿದರು. ಸಂಘ ಪರಿವಾರದ ಜತೆಗೆ ಗುರುತಿಸಿಕೊಂಡಿರುವ “ಕೇಸರಿ’ ವಾರಪತ್ರಿಕೆ ಭಾರತದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಕೊಂಡಾಡಿದ್ದಾರೆ. ಅದರ ಜತೆಗೆ ಹೊಸ ತಲೆಮಾರಿನವರು ಸಂಘಟನೆ ಬೆಳೆದು ಬಂದ ದಾರಿಯನ್ನೂ ಅಧ್ಯಯನ ಮಾಡಬೇಕು ಎಂದರು. ಎಪ್ಪತ್ತು ವರ್ಷಗಳಲ್ಲಿ ವಾರಪತ್ರಿಕೆ ಹಲವು ಕಠಿನ ದಾರಿಗಳನ್ನು ತುಳಿದು ಸದೃಢವಾಗಿ ಬೆಳೆದು ನಿಂತಿದೆ. ಒಂದು ಅವಧಿಯಲ್ಲಿ ಮಾಹಿತಿ ಪ್ರಕಟಿಸಬೇಕೆಂದಿದ್ದರೆ ಅನುಮತಿ ಪಡೆಯಬೇಕಾಗಿತ್ತು. ಆದರೆ ಸತ್ಯದ ಮೇಲೆ ನಂಬಿಕೆ ಒಂದಲ್ಲ ಒಂದು ದಿನ ಜಯ ತಂದುಕೊಡುತ್ತದೆ ಎಂಬ ನಂಬಿಕೆಯೇ ಕೇಸರಿಗೆ ನೆರವಾಯಿತು ಎಂದು ಶ್ಲಾಘಿಸಿದರು.

Advertisement

ಪುಸ್ತಕ ಬಿಡುಗಡೆ: ಇದೇ ಕಾರ್ಯಕ್ರಮದಲ್ಲಿ “ಆರ್‌ಎಸ್‌ಎಸ್‌ ಇನ್‌ ಕೇರಳ: ಸಗ ಆಫ್ ಎ ಸ್ಟ್ರಗಲ್‌’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ. ಡಾ| ಎ.ಕೆ.ಎಂ. ದಾಸ್‌, ವಿ.ಎಂ.ಗೋಪೀನಾಥ್‌ ಮತ್ತು ಶಾಬು ಪ್ರಸಾದ್‌ ಸೇರಿಕೊಂಡು ಈ ಪುಸ್ತಕ ಬರೆದಿದ್ದಾರೆ. ಕೇರಳದಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರ ಕೊಲೆ, ಹಲ್ಲೆ ಪ್ರಕರಣಗಳ ಸಾದ್ಯಂತ ವಿವರ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next