Advertisement

ಎಲ್ಲರ ಸುಖದ ಕಲ್ಪನೆಯಿಂದ ಬೇಧ ರಹಿತ ಸ್ವಾತಂತ್ರ್ಯ :ಆರ್ ಎಸ್ಎಸ್ ಸರಸಂಘ ಚಾಲಕ ಭಾಗವತ್

12:54 PM Oct 15, 2021 | Team Udayavani |

ನಾಗ್ಪುರ : ಸಂಪೂರ್ಣ ರಾಷ್ಟ್ರ ಒಂದಾಗಿ ಸಮಾಜದ ಬೇಧಗಳನ್ನು ತೊಡೆದು ಹಾಕಬೇಕು, ಎಲ್ಲರ ಸುಖದ ಕಲ್ಪನೆಯಿಂದ ಬೇಧ ರಹಿತ ಸ್ವಾತಂತ್ರ್ಯ ನಮ್ಮದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ  ಮೋಹನ್ ಭಾಗವತ್ ಅವರು ಶುಕ್ರವಾರ ಹೇಳಿದ್ದಾರೆ.

Advertisement

ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಅಸಂತೋಷ ಉತ್ಪತ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಜಾತಿ ಜಾತಿ ನಡುವೆ, ಪ್ರದೇಶ ಪ್ರದೇಶಗಳ ನಡುವೆ, ಭಾಷೆ, ಭಾಷೆಗಳ ನಡುವೆ ಸಂಘರ್ಷ ಉತ್ಪತ್ತಿ ಮಾಡುವ ಯತ್ನ ಜಾರಿಯಲ್ಲಿದೆ. ಆತಂಕ ದಿಂದ ಆತಂಕವನ್ನು ಉತ್ಪತ್ತಿ ಮಾಡುವ ಪ್ರಯತ್ನ ಮತ್ತು ಅದನ್ನು ಶಮನ ಮಾಡುವವರನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕರೋನಾ ಕಾಲದಲ್ಲಿ ಬಾಲಕರ ಕೈಗೆ ಮೊಬೈಲ್ ಬಂತು, ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಯುವ ಜನತೆ ಏನು ನೋಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ.ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿದೆ. ಉಚ್ಛ ವರ್ಗದ ಜನರಿಂದ ಸಾಮಾನ್ಯ ಜನರು ನಶೆಗೆ ದಾಸರಾಗುತ್ತಿದ್ದಾರೆ. ಬಿಟ್ಕಾಯಿನ್ ಕರೆನ್ಸಿ ಮೇಲೆ ಯಾವ ರಾಷ್ಟ್ರದ ನಿಯಂತ್ರಣ ಇದೆ. ಶಾಸನ ಮಾಡಬೇಕು. ಶಾಸನ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಅದು ಇಂದಲ್ಲ ನಾಳೆ ಆಗುತ್ತದೆ. ಸರಕಾರ ಈ ವಿಷಯಗಳನ್ನು ನಿಯಂತ್ರಿಸಬೇಕು ಎಂದರು.

ನವತರುಣರು ಏನು ಮಾಡಬೇಕು ಎನ್ನುವುದನ್ನು ಮನೆಗಳಲ್ಲಿ ತಂದೆ-ತಾಯಿ ಸಂಸ್ಕಾರಗಳ ಮೂಲಕ ಕಲಿಸಬೇಕು. ನಮ್ಮ ಕಾರ್ಯಕರ್ತರು ಕುಟುಂಬ ಪ್ರಭೋದನೆ ಮೂಲಕ ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಸಹಿ ಹಾಕುವಾಗಲೂ ನಮ್ಮ ಭಾಷೆಗಳನ್ನು ಬಳಸಿ, ನಮ್ಮ ಭೋಜನ , ನಮ್ಮ ಆಚರಣೆಗಳನ್ನು ಉಳಿಸಿ ಎಂದರು.

Advertisement

ಜಾತಿ ಅಸಮಾನತೆ ಅತ್ಯಂತ ಪುರಾತನವಾದದ್ದು, ಅದನ್ನು ಬದಲಾಯಿಸಲು ಹಲವು ಮಂದಿ ಪ್ರಯತ್ನಿಸಿದ್ದಾರೆ. ಸಂಘವೂ ಪ್ರಯತ್ನಿಸುತ್ತಿದೆ ಎಂದರು.

ವ್ಯವಸ್ಥೆ ಬದಲಾಗುವ ಮೊದಲು ವಚನ ಕರ್ಮ ಮತ್ತು ವಾಣಿ ಯಲ್ಲಿ ಬದಲಾಗಬೇಕು ಸಂಘದ ಸದಸ್ಯರು ಪ್ರಯತ್ನ ಪಡುತ್ತಿದ್ದಾರೆ.

ನೇರ ವಿರುದ್ಧ ಮಾತುಗಳು ಸಾಮಾನ್ಯ ಎಲ್ಲರಲ್ಲೂ ಪ್ರೇಮ ಹೆಚ್ಚಿಸುವ ಭಾಷೆ ನಮ್ಮದಾಗಬೇಕು, ವ್ಯವಸ್ಥಾಗತ ವ್ಯವಹಾರವು ಬದಲಾಗುತ್ತದೆ
ಎಲ್ಲಾ ಪ್ರಾಂತ್ಯಗಳಲ್ಲಿ ಪ್ರಯತ್ನ ನಡೆಯುತ್ತಿದೆ. ಅನೌಪಚಾರಿಕ ಪಾರಿವಾರಿಕ ಮಾತುಕತೆ ನಡೆಯಬೇಕಾಗಿದೆ ಎಂದರು.

ಸಮಾಜ ಬದಲಾಗಲು ಬೇಧ ರಹಿತ ಸ್ವಾತಂತ್ರ್ಯಹೇಗೆ ನಡೆಯುತ್ತದೆ ಎಲ್ಲರ ಸುಖದ ಕಲ್ಪನೆಯಿಂದ. ಯಾರನ್ನೂ ಬಿಡದೆ ;ಸರ್ವೇ ಜನೋ; ಎಲ್ಲರ ಸುಖದ ಕಲ್ಪನೆ ನಮ್ಮ ಮಂತ್ರದಲ್ಲಿದೆ. ಅಖಂಡತೆಯ ರೂಪದಲ್ಲಿ ದೇಶ ಸುಭದ್ರವಾಗಬೇಕು ಎಂದರು.

ಇತಿಹಾಸದಲ್ಲಿ ಪ್ರಾಚೀನ ಕಾಲದಿಂದ ಇದುವರೆಗೆ ಅನೇಕ ಉದಾಹರಣೆಗಳಿದ್ದು, ಬೇಧ ರಹಿತ ಸಮಾಜ ನಿರ್ಮಾಣ ನಮ್ಮ ಗುರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next