Advertisement

Vijayapura: ಬಸವನಾಡಲ್ಲಿ RSS ವರಿಷ್ಠ ಮೋಹನ್ ಭಾಗವತ್… ರಾನಡೆ ಆಶ್ರಮದಲ್ಲಿ ಧ್ಯಾನಮಗ್ನ

08:15 PM Jun 26, 2024 | Team Udayavani |

ವಿಜಯಪುರ: ಬಸವನಾಡಿನ ಭೀಮಾ ಸತ್ಸಂಗದ ನೆಲದಲ್ಲಿ ಆರ್.ಎಸ್.ಎಸ್. ಸರಸಂಘಚಾಲಕ ಮೋಹನ್ ಭಾಗವತ್ ಕಳೆದ ಮೂರು ದಿನಗಳಿಂದ ಸದ್ದಿಲ್ಲದೇ ಬೀಡುಬಿಟ್ಟಿದ್ದಾರೆ. ಝಡ್ ಪ್ಲಸ್ ಭದ್ರತೆ ಹೊಂದಿರುವ ಭಾಗವತ್ ಅವರು ಸಾರ್ವಜನಿಕ ಸಂಪರ್ಕದಿಂದ ದೂರವಿದ್ದು, ಧ್ಯಾನದಲ್ಲಿ ಮಗ್ನರಾಗಿದ್ದಾರೆ.

Advertisement

ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಹೊರ ಪರಿಸರದಲ್ಲಿರುವ ಶ್ರೀಗುರುದೇವ ರಾನಡೆ ಜೂ.24 ರಿಂದಲೇ ಬೀಡು ಬಿಟದ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದರೂ ಸಂಘ ಪರಿವಾರ ಅಥವಾ ಪಕ್ಷದ ಪ್ರಮುಖರಿಗೂ ಮಾಹಿತಿ ಇಲ್ಲ. ಮಾಹಿತಿ ಇದ್ದರೂ ಯಾರೊಬ್ಬರಿಗೂ ಆಶ್ರಮದ ಒಳಗೆ ಪ್ರವೇಶ ನೀಡುವ ಅಥವಾ ಭಾಗವತ್ ಅವರ ಭೇಟಿಗೆ ಅವಕಾಶ ನೀಡಲಾಗಿಲ್ಲ.

ಗುರುದೇವ ರಾನಡೆ ಆಶ್ರಮದಲ್ಲಿ ಭಾಗವತ್ ಠಿಕಾಣಿ ಹೂಡಿದ್ದರೂ ಝಡ್ ಪ್ಲಸ್ ಭದ್ರತೆಯಲ್ಲಿ ಇರುವ ಕಾರಣಕ್ಕೆ ಭೇಟಿಯನ್ನು ರಹಸ್ಯವಾಗಿ ಇರಿಸಿದ್ದು, ಆಶ್ರಮದ ಹೊರಗೆ ಜಿಲ್ಲೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಸಂಘಟನೆ, ರಾಜಕೀಯ ಜಂಜಡದಿಂದ ದೂರವಿದ್ದು ವಿಶ್ರಾಂತಿ ಪಡೆಯುತ್ತಿರುವ ಆರ್.ಎಸ್.ಎಸ್. ಸರಸಂಘಚಾಲಕ ಭಾಗವತ್, ಕಳೇದ ಮೂರು ದಿನದಿಂದ ಯಾರ ಭೇಟಿಗೂ ಅವಕಾಶ ನೀಡದೇ ಆಯ್ದ ಕೆಲವರೊಂದಿಗೆ ಆಶ್ರಮದಲ್ಲಿ ಧ್ಯಾನದಲ್ಲಿ ಮಗ್ನವಾಗಿ ಕುಳಿತಿದ್ದಾರೆ.

Advertisement

ಕಳೆದ ಹಲವು ವರ್ಷಗಳಿಂದ ಪ್ರತಿ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ತಪ್ಪದೇ ಶ್ರೀಗುರುದೇವ ರಾನಡೆ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಇರುವ ದಿನಗಳಷ್ಟು ಕಾಲ ಧ್ಯಾನದಲ್ಲಿ ಮಗ್ನರಾಗುವ ಆರ್‍ಎಸ್‍ಎಸ್ ವರಿಷ್ಠ, ನಾಲ್ಕು ದಿನ ಆಶ್ರಮದಲ್ಲಿ ತಂಗಿ, ವಿಶ್ರಾಂತಿ ಬಳಿಕ ತೆರಳುತ್ತಾರೆ.

ಗುರುವಾರ ಬೆಳಿಗ್ಗೆ ರಾನಡೆ ಆಶ್ರಮದಿಂದ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ, ನಂತರ ದೇವರನಿಂಬರಗಿ ಗ್ರಾಮದ ಮಠದ ದರ್ಶನ ಮಾಡಲಿದ್ದಾರೆ. ಬಳಿಕ ಕರ್ನಾಟಕದ ಪ್ರವಾಸವನ್ನು ಮುಗಿಸಿ ಮಹಾರಾಷ್ಟ್ರ ರಾಜ್ಯದ ಉಮದಿಗೆ ಪಯಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಗಡ್ಕರಿ ಭೇಟಿಯಾದ ಸಂಸದ ಶ್ರೀನಿವಾಸ ಪೂಜಾರಿ: ಕಾಮಗಾರಿ ತುರ್ತು ನಡೆಸಲು ಮನವಿ

Advertisement

Udayavani is now on Telegram. Click here to join our channel and stay updated with the latest news.

Next