Advertisement
ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಹೊರ ಪರಿಸರದಲ್ಲಿರುವ ಶ್ರೀಗುರುದೇವ ರಾನಡೆ ಜೂ.24 ರಿಂದಲೇ ಬೀಡು ಬಿಟದ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದರೂ ಸಂಘ ಪರಿವಾರ ಅಥವಾ ಪಕ್ಷದ ಪ್ರಮುಖರಿಗೂ ಮಾಹಿತಿ ಇಲ್ಲ. ಮಾಹಿತಿ ಇದ್ದರೂ ಯಾರೊಬ್ಬರಿಗೂ ಆಶ್ರಮದ ಒಳಗೆ ಪ್ರವೇಶ ನೀಡುವ ಅಥವಾ ಭಾಗವತ್ ಅವರ ಭೇಟಿಗೆ ಅವಕಾಶ ನೀಡಲಾಗಿಲ್ಲ.
Related Articles
Advertisement
ಕಳೆದ ಹಲವು ವರ್ಷಗಳಿಂದ ಪ್ರತಿ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ತಪ್ಪದೇ ಶ್ರೀಗುರುದೇವ ರಾನಡೆ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಇರುವ ದಿನಗಳಷ್ಟು ಕಾಲ ಧ್ಯಾನದಲ್ಲಿ ಮಗ್ನರಾಗುವ ಆರ್‍ಎಸ್‍ಎಸ್ ವರಿಷ್ಠ, ನಾಲ್ಕು ದಿನ ಆಶ್ರಮದಲ್ಲಿ ತಂಗಿ, ವಿಶ್ರಾಂತಿ ಬಳಿಕ ತೆರಳುತ್ತಾರೆ.
ಗುರುವಾರ ಬೆಳಿಗ್ಗೆ ರಾನಡೆ ಆಶ್ರಮದಿಂದ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ, ನಂತರ ದೇವರನಿಂಬರಗಿ ಗ್ರಾಮದ ಮಠದ ದರ್ಶನ ಮಾಡಲಿದ್ದಾರೆ. ಬಳಿಕ ಕರ್ನಾಟಕದ ಪ್ರವಾಸವನ್ನು ಮುಗಿಸಿ ಮಹಾರಾಷ್ಟ್ರ ರಾಜ್ಯದ ಉಮದಿಗೆ ಪಯಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಗಡ್ಕರಿ ಭೇಟಿಯಾದ ಸಂಸದ ಶ್ರೀನಿವಾಸ ಪೂಜಾರಿ: ಕಾಮಗಾರಿ ತುರ್ತು ನಡೆಸಲು ಮನವಿ