Advertisement

RSS ಕಾರ್ಯಕರ್ತನ ಕೊಲೆ: ಇಂದು ಕೇರಳ ಹರತಾಳ

12:41 AM Jul 30, 2017 | Karthik A |

ತಿರುವನಂತಪುರ: ದುಷ್ಕರ್ಮಿಗಳ ಗುಂಪೊಂದು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಈ ಹತ್ಯೆಗೆ ಸಿಪಿಐ-ಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ರವಿವಾರ ಕೇರಳ ಬಂದ್‌ಗೆ ಕರೆ ನೀಡಿದೆ. ರೌಡಿಶೀಟರ್‌ನೊಬ್ಬನ ತಂಡ ಈ ಹತ್ಯೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ. ಶನಿವಾರ ರಾತ್ರಿ 9 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, 34 ವರ್ಷದ ರಾಜೇಶ್‌ ಅವರನ್ನು ಹತ್ಯೆ ಮಾಡಲಾಗಿದೆ. ಇವರ ಎಡಗೈಯನ್ನೂ ಕತ್ತರಿಸಲಾಗಿದೆ ಎಂದಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದಿದ್ದಾರೆ.

Advertisement

ಈ ಹತ್ಯೆಯನ್ನು ಖಂಡಿಸಿರುವ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಮ್‌ ರಾಜಶೇಖರನ್‌ ಅವರು, ಇದಕ್ಕೆ ಸಿಪಿಐ-ಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ದಾರೆ. ಜತೆಗೆ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದ್ದಾರೆ. ಕೇರಳ ಬಿಜೆಪಿ ಘಟಕದ ಕಚೇರಿ ಮೇಲಿನ ದಾಳಿ ಮತ್ತು ಸಿಪಿಐ – ಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್‌ ಕೊಡಿಯೇರಿ ಮನೆ ಮೇಲೆ ದಾಳಿ ನಡೆದ ಬಳಿಕ ರಾಜ್ಯಾದ್ಯಂತ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಜತೆಗೆ ಶುಕ್ರವಾರ ನಡೆದ ಹಿಂಸಾಚಾರ ಸಂಬಂಧ ಸಿಪಿಐ-ಎಂನ ಯುವ ಘಟಕದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next