Advertisement
ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ನಂತರ ಮಂಗಳವಾರ ರೈಲ್ವೆ “ಪಿಂಕ್ ಬುಕ್’ ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಉದ್ದೇಶಿತ ಉಪನಗರ ರೈಲು ಯೋಜನೆ ಬಗ್ಗೆ ಅದರಲ್ಲಿ ಉಲ್ಲೇಖಗೊಂಡಿದೆ. ಅದರಂತೆ ಯೋಜನೆಗೆ ತಗಲುವ ವೆಚ್ಚವನ್ನು ಶೇ.50 ಕೇಂದ್ರ ಮತ್ತು ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. 160 ಕಿ.ಮೀ. ವ್ಯಾಪ್ತಿಯಲ್ಲಿ ಉಪನಗರ ರೈಲ್ವೆ ಜಾಲ ವಿಸ್ತಾರಗೊಳ್ಳಲಿದೆ.
Related Articles
Advertisement
ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಜ್ಞಾನಭಾರತಿಯಲ್ಲಿ ಸುಮಾರು 30 ಎಕರೆ ಹಾಗೂ ಎನ್‌ಜಿಎಫ್ನಲ್ಲಿ 40 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈಗ ಬಿಎಂಆರ್‌ಸಿ ಮಾದರಿಯಲ್ಲೇ ತ್ವರಿತವಾಗಿ ಸಬ್ ಅರ್ಬನ್‌ಗೆ ಎಸ್‌ಪಿವಿ (ಸ್ಪೇಷಲ್ ವೇಹಿಕಲ್ ಪರ್ಪಸ್) ನಿರ್ಮಿಸಬೇಕು ಎಂದು ಪ್ರಜಾರಾಗ್ ವೇದಿಕೆ ಸದಸ್ಯ ಸಂಜೀವ್ ದ್ಯಾಮಣ್ಣವರ ತಿಳಿಸಿದ್ದಾರೆ.
ಸ್ವಾಗತಾರ್ಹ: ಸಬ್ ಅರ್ಬನ್ ಯೋಜನೆ ಜತೆಗೆ 535 ಕೋಟಿ ರೂ. ವೆಚ್ಚದ ಯಶವಂತಪುರ-ಹೊಸೂರು ಜೋಡಿ ಮಾರ್ಗ, 250 ರೂ.ಗಳಲ್ಲಿ ಡೆವಲಪ್‌ಮೆಂಟ್ ಕೋಚಿಂಗ್ ಟರ್ಮಿನಲ್, ಆಟೋಮೆಟಿಕ್ ಸಿಗ್ನಲಿಂಗ್, ಆಧುನೀಕರಣ, ಸ್ಟೇಬಲಿಂಗ್ ಲೈನ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮೆಮು ಶೆಡ್ ಮೇಲ್ದರ್ಜೆಗೇರಿಸಲು 26 ಕೋಟಿ ರೂ., ಚಿಕ್ಕಬಾಣಾವರ-ಹುಬ್ಬಳ್ಳಿ ಮಾರ್ಗಕ್ಕೆ 10 ಕೋಟಿ ರೂ.,
ಬೈಯಪ್ಪನಹಳ್ಳಿ 3ನೇ ಕೋಚಿಂಗ್ ಟರ್ಮಿನಲ್‌ಗೆ 45 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ರಾಜ್ಯದ ರೈಲ್ವೆಗೆ ಸಮರ್ಪಕ ಅನುದಾನ ದೊರಕಿದೆ ಎಂದು ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಟಿ.ಪಿ. ಲೋಕೇಶ್ ಅಭಿಪ್ರಾಯಪಡುತ್ತಾರೆ. ಆದರೆ, 500 ಕೋಟಿ ವೆಚ್ಚದಲ್ಲಿ ಕಂಟೋನ್ಮೆಂಟ್-ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಮಾರ್ಗ ನಿರ್ಮಾಣದ ಪ್ರಸ್ತಾವನೆ ಬಗ್ಗೆ ಪ್ರಸ್ತಾಪ ಆಗದಿರುವುದು ಬೇಸರ ತಂದಿದೆ.
ರೈಲ್ವೆ ವಿದ್ಯುದ್ದೀಕರಣಕ್ಕೆ ಹೆಚ್ಚು ಒತ್ತುಹುಬ್ಬಳ್ಳಿ: ಕೇಂದ್ರ ಸರಕಾರ ಮಂಡಿಸಿದ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ನೈಋತ್ಯ ರೈಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ವಿದ್ಯುದ್ದೀಕರಣ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ತಿಳಿಸಿದರು. ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸಬ್ ಅರ್ಬನ್ ನೆಟ್‌ವರ್ಕ್ 160 ಕಿ.ಮೀ. ನಿರ್ಮಾಣಕ್ಕೆ 17,000 ಕೋಟಿ ರೂ. ಹಾಗೂ 2 ಡಬ್ಲಿಂಗ್ ಪ್ರಾಜೆಕ್ಟ್ಗಳಿಗೆ 545 ಕೋಟಿ ರೂ. ಘೋಷಿಸಲಾಗಿದೆ ಎಂದರು. ಹೊಸಪೇಟೆ-ಸ್ವಾಮಿಹಳ್ಳಿ (59 ಕಿ.ಮೀ), ಬಿರೂರ-ತಾಳಗುಪ್ಪ (161 ಕಿ.ಮೀ.), ಮೈಸೂರು-ಹಾಸನ-ಮಂಗಳೂರು (347 ಕಿ.ಮೀ), ಮೈಸೂರು-ಚಾಮರಾಜನಗರ (61 ಕಿ.ಮೀ), ಕಡೂರು-ಚಿಕ್ಕಮಗಳೂರು (46 ಕಿ.ಮೀ.), ಚಿಕ್ಕಬಾಣಾವರ-ಹಾಸನ (166 ಕಿ.ಮೀ.), ಬಂಗಾರಪೇಟೆ-ಯಲಹಂಕ (149 ಕಿ.ಮೀ) ಸೇರಿ ಒಟ್ಟು 989 ಕಿ.ಮೀ. 919.44 ಕೋಟಿ ರೂ. ವೆಚ್ಚದಲ್ಲಿ ಇಲೆಕ್ಟ್ರಿಫಿಕೇಶನ್ ಮಾಡಲಾಗುವುದು ಎಂದರು. ಗದಗ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗಡ-ಹನುಮಸಾಗರ-ಇಳಕಲ್ಲ-ಲಿಂಗಸೂಗೂರು-ಕೃಷ್ಣಾ (216 ಕಿ.ಮೀ.) ಹಾಗೂ ಚಂದರಗಾಂವ-ಕನಸೌಲಿಮ್, ಸಲೆಮ್-ಚನ್ನಸಂದ್ರ, ಸಲೆಮ್-ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ-ಚನ್ನಸಂದ್ರದಲ್ಲಿ 4 ಫ್ಲೈಓವರ್‌ಗೆ ಸಮೀಕ್ಷೆ ಕಾರ್ಯಕ್ಕೆ ಅನುಮತಿ ಸಿಕ್ಕಿದೆ ಎಂದರಲ್ಲದೇ 5 ರೈಲ್ ಓವರ್ ಬ್ರಿಡ್ಜ್, 23 ರೈಲ್ ಅಂಡರ್ ಬ್ರಿಡ್ಜ್ ನಿರ್ಮಿಸಲು 131.89 ಕೋಟಿ ರೂ. ಘೋಷಿಸಲಾಗಿದೆ ಎಂದರು. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 3,353 ಕೋಟಿ ರೂ. ಅನುದಾನ ನೀಡಲಾಗಿದ್ದು, 2009ರಿಂದ 2014ರವರೆಗೆ ನೀಡಲಾದ ಅನುದಾನಕ್ಕೆ ಹೋಲಿಸಿದರೆ ಶೇ.301 ಪಟ್ಟು ಹೆಚ್ಚು ಮೊತ್ತ ಮೀಸಲಿಟ್ಟಂತಾಗಿದೆ.
-ಪಿಯೂಷ್ ಗೋಯಲ್, ರೈಲ್ವೆ ಸಚಿವ