Advertisement

ವಿದ್ಯುತ್‌ ಕಂಪನಿಗಳಿಗೆ 90,000 ಕೋಟಿ ರೂ.

07:25 AM May 14, 2020 | Lakshmi GovindaRaj |

ಭಾರತದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಪ್ರಯತ್ನವಾಗಿ, ಈಗಾಗಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ವಿದ್ಯುತ್‌ ವಿತರಣೆ ಕಂಪನಿಗಳಿಗೆ (ಡೆಸ್ಕಾಂಗಳು) 90,000 ಕೋಟಿ ರೂ. ನೆರವು ಒದಗಿಸುವುದಾಗಿ ಕೇಂದ್ರ ಘೋಷಿಸಿದೆ. ಡೆಸ್ಕಾಂಗಳು ಇಂದು ಅನಿರೀಕ್ಷಿತವಾಗಿರುವ  ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿ ಪ್ರಸ್ತುತ ನೀಡುತ್ತಿರುವ 90,000 ಕೋಟಿ ರೂ. ನೆರವುಸರ್ಕಾರಿ ಸಂಸ್ಥೆಗಳ ಮೇಲಿನ ಆರ್ಥಿಕ ಒತ್ತಡ ಕಡಿಮೆ ಮಾಡಲಿದೆ. ಜತೆಗೆ  ವಿದ್ಯುತ್‌ ಉತ್ಪಾದನೆ ಕಂಪನಿಗಳಿಗೂ ಉತ್ತೇಜನ ಸಿಗಲಿದೆ.

Advertisement

ಇದರಿಂದ ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯ ಟ್ಯಾರಿಫ್‌ ದರ ಸೇರಿ ಹಲವು ಮಧ್ಯಮ ಮತ್ತು ದೀರ್ಘ‌ಕಾಲಿಕ ಪ್ರಯೋಜನಗಳು ಲಭ್ಯವಾಗಲಿವೆ ಎಂದು  ಸೆಂಟ್ರಮ್‌ ಕ್ಯಾಪಿಟಲ್‌ ಲಿಮಿಟೆಡ್‌ನ‌ ಸಂದೀಪ್‌ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಸ್ವಾಮ್ಯದ ಪವರ್‌ ಫೆ„ನಾನ್ಸ್‌ ಕಾರ್ಪೊರೇಷನ್‌ಗಳು ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮಗಳು ಡೆಸ್ಕಾಂಗಳ ಕರಾರುಗಳಿಗೆ ಪ್ರತಿಯಾಗಿ  ಮಾರುಕಟ್ಟೆಯಿಂದ 90,000 ಕೋಟಿ ರೂ. ಸಂಗ್ರಹಿಸುವ ಮೂಲಕ ಲಿಕ್ವಿಡಿಟಿಯನ್ನು ಉತ್ತೇಜಿಸಲಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಗ್ಯಾರಂಟಿ ನೀಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next