Advertisement

80‌ ಕೋಟಿ ರೂ. ಸಂಭಾವನೆ ಕೇಳಿ ಅಲ್ಲು ಜೊತೆ ಸಿನಿಮಾ ಮಾಡುವ ಅವಕಾಶ ಕಳೆದುಕೊಂಡ್ರಾ ಅಟ್ಲಿ?

05:38 PM Jun 19, 2024 | Team Udayavani |

ಹೈದರಾಬಾದ್:‌ ಕಾಲಿವುಡ್‌ ಚಿತ್ರರಂಗದ ಸೂಪರ್‌ ಹಿಟ್‌ ನಿರ್ದೇಶಕ ಅಟ್ಲಿ ಕುಮಾರ್‌ ʼಜವಾನ್‌ʼ ಬಳಿಕ ಯಾವ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

Advertisement

ʼಜವಾನ್‌ ʼ ಬಳಿಕ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಖ್ಯಾತ ನಟರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ದಳಪತಿ ವಿಜಯ್‌ ಅವರ ಹೆಸರು ಕೂಡ ಈ ಸಾಲಿನಲ್ಲಿ ಕೇಳಿ ಬಂದಿತ್ತು.

ಅಲ್ಲು ಅರ್ಜುನ್‌ ಅವರೊಂದಿಗೆ ಅಟ್ಲಿ ಕುಮಾರ್‌ ಮೊದಲ ಬಾರಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲ ಸಮಯದ ಹಿಂದೆ ಹೊರಬಿದ್ದಿತ್ತು.

ಅಲ್ಲು ಅರ್ಜುನ್‌ ಜೊತೆಗಿನ ಸಿನಿಮಾಕ್ಕೆ ಅಟ್ಲಿ  60 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಇದು ಕಾಲಿವುಡ್‌ ನಿರ್ದೇಶಕನೊಬ್ಬ ಪಡೆಯುವ ಅತೀ ಹೆಚ್ಚು ಸಂಭಾವನೆ ಆಗಲಿದೆ. ಆ ಮೂಲಕ ಖ್ಯಾತ ಕಾಲಿವುಡ್‌ ನಿರ್ದೇಶಕ ಎಸ್.‌ ಶಂಕರ್‌ ಅವರ ಸಂಭಾವನೆಯನ್ನು ಕೂಡ ಅಟ್ಲಿ ಮೀರಿಸಲಿದ್ದಾರೆ ಎಂದು ವರದಿ ಆಗಿತ್ತು.

ಸಿನಿಮಾದ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಬಂದಿರುವ ಲೇಟೆಸ್ಟ್‌ ಅಪ್ಡೇಟ್‌ ಪ್ರಕಾರ ಅಟ್ಲಿ – ಅರ್ಜುನ್‌ ಸಿನಿಮಾ ನಿಂತು ಹೋಗಿದೆ ಎನ್ನಲಾಗಿದೆ.

Advertisement

ಅಲ್ಲು ಅರ್ಜುನ್‌ ಅವರೊಂದಿಗೆ ಸಿನಿಮಾ ಮಾಡಲು ಅಟ್ಲಿ 80 ಕೋಟಿ ರೂ. ಸಂಭಾವನೆಯ ಬೇಡಿಕೆಯನ್ನಿಟ್ಟಿದ್ದಾರೆ. ಇದನ್ನು ಕೇಳಿ ನಿರ್ಮಾಪಕ ಅಲ್ಲು ಅರವಿಂದ್‌ ಕೂಡ ಶಾಕ್‌ ಆಗಿದ್ದಾರೆ. ಹೀಗಾಗಿ ಅಲ್ಲು ಅರವಿಂದ್, ಅಲ್ಲು ಅರ್ಜುನ್ ಇಬ್ಬರೂ ಅಟ್ಲಿಗೆ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸದಿರಲು ನಿರ್ಧರಿಸಿದ್ದಾರೆ. ಸದ್ಯ ಈ ಪ್ರಾಜೆಕ್ಟ್‌ ಹೋಲ್ಡ್‌ ನಲ್ಲಿಟ್ಟಿದ್ದಾರೆ ಎಂದು ʼತೆಲುಗು123ʼ ವರದಿ ತಿಳಿಸಿದೆ.

ಮುಂದೆ ಅಟ್ಲಿ ಸಲ್ಮಾನ್‌ ಖಾನ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿಅಧಿಕೃತ ಘೋಷಣೆ ಆಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next