Advertisement
ಅಂದಾಜು ಪಟ್ಟಿ: ಅರಮನೆ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಸೆ.21ರಂದು ಸಿಎಂ ಸಿದ್ದರಾಮಯ್ಯ ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಮುನ್ನ ಸಂಜೆ 6 ರಿಂದ 6.45ರವರೆಗೆ ನಾದಸ್ವರ ನುಡಿಸುವ ಮೈಸೂರಿನ ನಾದಸ್ವರ ಕಲಾವಿದರಾದ ವಿದ್ವಾನ್ ಯದುಕುಮಾರ್ ಮತ್ತು ತಂಡದವರಿಗೆ 30 ಸಾವಿರ ರೂ., ಉದ್ಘಾಟನಾ ಸಮಾರಂಭದ ನಂತರ ರಾತ್ರಿ 8ರಿಂದ 8.45ರವರೆಗೆ ದಸರಾ ವಿಕಾಸ ವೈಭವ ನೃತ್ಯರೂಪಕ ನೀಡುವ ಬೆಂಗಳೂರಿನ ಪ್ರಭಾತ್ ಕಲಾವಿದರ ತಂಡಕ್ಕೆ 1.5 ಲಕ್ಷ ರೂ.,
ಸೆ.22ರ ಸಂಜೆ 6 ರಿಂದ 7ಗಂಟೆವರೆಗೆ ಸಿತಾರ್ ಸಾರಂಗಿ ಸಿತಾರ್ ಜುಗಲ್ ಬಂದಿ ನೀಡುವ ಪಂ.ಅಂಕುಶ್‌ನಾಯಕ್, ಉ.ಫಯಾಜ್ ಖಾನ್, ಉ.ರಫಿಕ್ ಖಾನ್‌ರಿಗೆ 2.6 ಲಕ್ಷ ರೂ., ಹಿಂದೂಸ್ತಾನಿ ಸಂಗೀತ ಗಾಯನ ನೀಡುವ ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ್‌ರಿಗೆ 1.8 ಲಕ್ಷ ರೂ., ನೃತ್ಯವೈಭವ ನೀಡುವ ಚೆನ್ನೈನ ನೃತ್ಯ ಕಲಾವಿದೆ ಹಾಗೂ ಖ್ಯಾತ ಚಲನಚಿತ್ರ ತಾರೆ ವಿ.ಶೋಭನಾ ಅವರಿಗೆ 7ಲಕ್ಷ ರೂ., 23ರ ಸಂಜೆ 6 ರಿಂದ 6.45ರವರೆಗೆ ಸಿದ್ದಿ ನೃತ್ಯಯೋಗ ಸಂಗಮ ನೀಡುವ ಬೆಂಗಳೂರಿನ ಖ್ಯಾತ ಭರತನಾಟ್ಯ ಕಲಾವಿದೆ ವಿದ್ವಾನ್ ಯಾಮಿನಿ ಮುತ್ತಣ್ಣ ಅವರಿಗೆ 1.25 ಲಕ್ಷ ರೂ., ಬುದ್ಧಶರಣಂ ನೃತ್ಯ ರೂಪಕ ನಡೆಸಿಕೊಡುವ ಮೈಸೂರಿನ ಗಾನಭಾರತಿ ಸಂಗೀತ ನೃತ್ಯ ಶಾಲೆ ಕಲಾವಿದರಿಗೆ 1 ಲಕ್ಷ ರೂ.,
Related Articles
Advertisement
ಸೆ.25ರ ಸಂಜೆ 6 ರಿಂದ 8ಗಂಟೆವರೆಗೆ ಪೊಲೀಸ್ ಬ್ಯಾಂಡ್, ಫ್ಯೂಜನ್ ಸಂಗೀತ ನೀಡುವ ಬೆಂಗಳೂರಿನ ಪಂ.ಪ್ರಕಾಶ್ ಸೊಂಟಕ್ಕಿ ಮತ್ತು ವೃಂದದವರಿಗೆ 2 ಲಕ್ಷ ರೂ. ಸೆ.26ರ ಸಂಜೆ 6 ರಿಂದ 7ಗಂಟೆವರೆಗೆ ಕನ್ನಡ ಡಿಂಡಿಮ ಸುಗಮ ಸಂಗೀತ ನೀಡುವ ಬೆಂಗಳೂರಿನ ಧ್ವನಿ ಸುಗಮ ಸಂಗೀತ ಸಂಸ್ಥೆ ಕಲಾವಿದರಿಗೆ 3 ಲಕ್ಷ ರೂ., ಭರತನಾಟ್ಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನೀಡುವ ದೇವಯಾನಿ ಅವರಿಗೆ 2 ಲಕ್ಷ ರೂ.,
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನೀಡುವ ಚೆನ್ನೈನ ಖ್ಯಾತ ಸಂಗೀತಗಾರ ವಿ.ಟಿ.ಎಂ.ಕೃಷ್ಣ ಅವರಿಗೆ 4ಲಕ್ಷ ರೂ., ಸೆ.27ರಂದು ಸಂಜೆ 6 ರಿಂದ 6.45ರವರೆಗೆ ತಾಳವಾದ್ಯ ಕಚೇರಿ ನಡೆಸಿಕೊಡುವ ಬೆಂಗಳೂರಿನ ಅನೂರು ಅನಂತಕೃಷ್ಣ ಅವರಿಗೆ 2 ಲಕ್ಷ ರೂ., ವಿದ್ಯುನ್ಮದನಿಕಾ ನೃತ್ಯರೂಪಕ ನೀಡುವ ಮೈಸೂರಿನ ನಾಟ್ಯಗುರು ವಿ.ವಸುಂಧರಾ ದೊರೆಸ್ವಾಮಿ ಅವರಿಗೆ 1.25 ಲಕ್ಷ ರೂ., ಮುಂಬೈನ ಖ್ಯಾತ ಘಜಲ್ ಗಾಯಕ ಉ.ತಲತ್ ಅಜೀಜ್ ಅವರಿಗೆ 6 ಲಕ್ಷ ರೂ.
ಅರ್ಜುನ್ ಜನ್ಯ ರೆಕಾರ್ಡಿಂಗ್ ಸ್ಟುಡಿಯೋ ಕಾರ್ಯಕ್ರಮಕ್ಕೆ 15.34 ಲಕ್ಷ ಸಂಭಾವನೆಸೆ.28ರಂದು ಸಂಗೀತಗಾಯನ ನೀಡುವ ಪುಣೆಯ ಖ್ಯಾತ ಸಂಗೀತಗಾರ ವಿ.ನಂದಿನಿ ಗುಜಾರ್ ಅವರಿಗೆ 1.25 ಲಕ್ಷ ರೂ., ಹಿಂದೂಸ್ತಾನಿ ಗಾಯನ- ಕೊಳಲು ವಾದನ ಜುಗಲ್ ಬಂದಿ ನೀಡುವ ಬೆಂಗಳೂರಿನ ಪಂ.ಜಯತೀರ್ಥ ಮೇವುಂಡಿ ಹಾಗೂ ಪಂ.ಪ್ರವೀಣ್ ಗೋಡಿಂಡಿ ಅವರಿಗೆ 2.5ಲಕ್ಷ ರೂ., ಕಥಕ್ ನೃತ್ಯ ಕಾರ್ಯಕ್ರಮ ನೀಡುವ ಬೆಂಗಳೂರಿನ ಖ್ಯಾತ ಕಥಕ್ ಕಲಾವಿದ ವಿ.ಮಧು ನಟರಾಜ್‌ರಿಗೆ 1.5 ಲಕ್ಷ ರೂ., ಜನಪದ ಸಂಗೀತ ನೀಡುವ ಪಿಚ್ಚಳ್ಳಿ ಶ್ರೀನಿವಾಸ, ಮಳವಳ್ಳಿ ಮಹದೇವಸ್ವಾಮಿ ಸೇರಿದಂತೆ 8ಜನ ಕಲಾವಿದರಿಗೆ 2.25 ಲಕ್ಷ ರೂ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರ ನೀಡುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಓಂ ಶಕ್ತಿ ರೆಕಾರ್ಡಿಂಗ್ ಸ್ಟುಡಿಯೋ ಕಾರ್ಯಕ್ರಮಕ್ಕೆ 15.34 ಲಕ್ಷ ರೂ. ನೀಡಲಾಗುತ್ತಿದೆ.