ನವದೆಹಲಿ:ಮೂಲಭೂತ ಸೌಕರ್ಯ ಹಾಗೂ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ 7 ಲಕ್ಷ ಕೋಟಿ ರೂಪಾಯಿ ವೆಚ್ಚದ 83 ಸಾವಿರ ಕಿಲೋ ಮೀಟರ್ ಬೃಹತ್ ಹೆದ್ದಾರಿ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ಮಾಧ್ಯಮದ ವರದಿ ಹೇಳಿದೆ.
2022ರ ವೇಳೆಗೆ 6.9(7) ಲಕ್ಷ ಕೋಟಿ ರೂ ಹೂಡಿಕೆ ಮಾಡಲಿರುವ ಈ ಯೋಜನೆಯಡಿ ಅಂದಾಜು 83,000 ಕಿ.ಮೀ ಹೆದ್ದಾರಿ ನಿರ್ಮಾಣವಾಗಲಿದೆ. ಈ ಯೋಜನೆಯಲ್ಲಿ ದೇಶದ ಗಡಿಭಾಗವನ್ನು ಸಂಪರ್ಕಿಸಬಲ್ಲ ನೂತನ 28,400 ಕಿಲೋ ಮೀಟರ್ ನ ಭಾರತ್ ಮಾಲಾ ಹೈವೇ ಯೋಜನೆಯೂ ಸೇರಿದೆ.
ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡಲು ಹಾಗೂ ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 32 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿಯುಳ್ಳ ಈ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಲಿದೆ. ವರದಿ ಪ್ರಕಾರ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಬಗ್ಗೆ ಮಂಗಳವಾರ ಸಂಜೆ
ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಅನುಮೋದನೆ ಬಗ್ಗೆ ಘೋಷಣೆ ಮಾಡಿ, ಮಾಹಿತಿ ನೀಡಿದರು.