Advertisement

Mumbai 3ನೇ ದೊಡ್ಡ ಸುರಂಗಕ್ಕೆ ಹಸಿರು ನಿಶಾನೆ

01:05 AM Apr 11, 2023 | Team Udayavani |

ಮುಂಬೈನ ಮೆರೈನ್‌ ಡ್ರೈವ್‌ ಹಾಗೂ ಈಸ್ಟರ್ನ್ ಫ್ರೀ ನಡುವೆ 6,500 ಕೋಟಿ ರೂ. ವೆಚ್ಚದಲ್ಲಿ ಭೂಗತ ಸುರಂಗ ನಿರ್ಮಾಣಕ್ಕೆ ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಹಸಿರು ನಿಶಾನೆ ತೋರಿದೆ. ಯೋಜನೆ ಪೂರ್ಣಗೊಂಡರೆ ಪ್ರಯಾಣಿಕರಿಗೆ 10 ನಿಮಿಷಕ್ಕಿಂತಲೂ ಅಧಿಕ ಸಮಯ ಉಳಿತಾಯವಾಗಲು ಸಹಕಾರಿಯಾಗಲಿದೆ. ಏನೀ ಯೋಜನೆ? ಇದರ ಪ್ರಯೋಜನವೇನು ಎಂಬುದರ ವಿವರ ಇಂತಿದೆ.

Advertisement

3ನೇ ಅತಿದೊಡ್ಡ ಸುರಂಗ
ಇದು ನಗರದಲ್ಲಿ 2+2 ಪಥದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಮುಂಬೈನ 3ನೇ ಅತಿದೊಡ್ಡ ಸುರಂಗವಾಗಲಿದೆ. ಮೆಟ್ರೋ3ರ ಗ್ರಾಂಟ್‌ ರೋಡ್‌ ಮತ್ತು ಗಿರ್ಗಾಂವ್‌ ನಿಲ್ದಾಣದಿಂದ 30 ಮೀ. ದೂರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಸ್ತೆ ಮೂಲಕ ನಿರ್ಮಾಣ ಕಾಮಗಾರಿ ಆರಂಭಗೊಳಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

6,500 ಕೋಟಿ ರೂ.-ಸುರಂಗ ನಿರ್ಮಾಣಕ್ಕೆ ತಗಲುವ ವೆಚ್ಚ

3.8 ಕಿ.ಮೀ- ಸುರಂಗದ ಉದ್ದ

10 ನಿಮಿಷಕ್ಕಿಂತ ಅಧಿಕ-ಪ್ರಯಾಣಿಕರಿಗೆ ಉಳಿಯುವ ಸಮಯ

Advertisement

*ಆರೆಂಜ್‌ಗೆಟ್‌, ಈಸ್ಟರ್ನ್ ಫ್ರೀ ವೇ, ಮೆರೈನ್‌ ಡ್ರೈವ್‌ಗೆ ಸುರಂಗ ಸಂಪರ್ಕ
*ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣ ಸುಗಮ

ಸಂಚಾರ ದಟ್ಟಣೆ ಎಲ್ಲೆಲ್ಲಿ ಕಡಿಮೆಯಾಗಲಿದೆ ?
ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌
ಕ್ರಾಫೋರ್ಡ್‌ ಮಾರ್ಕೆಟ್‌
ಜನರಲ್‌ ಪೋಸ್ಟ್‌ ಆಫೀಸ್‌

Advertisement

Udayavani is now on Telegram. Click here to join our channel and stay updated with the latest news.

Next