Advertisement

ಅತ್ಯಂತ ಅಪಾಯಕಾರಿ ಲ್ಯಾಪ್‌ಟಾಪ್‌ಗೆ 6.5 ಕೋಟಿ ರೂ.!

11:06 PM May 27, 2019 | Team Udayavani |

ವಾಷಿಂಗ್ಟನ್‌: ವಿಶ್ವದಲ್ಲಿ ಕೋಟ್ಯಂತರ ಕಂಪ್ಯೂಟರುಗಳನ್ನು ಬಾಧಿಸಿದ ಹಾಗೂ ಕೋಟ್ಯಂತರ ರೂ. ನಷ್ಟಕ್ಕೆ ಕಾರಣವಾದ ವೈರಸ್‌ಗಳನ್ನು ಹೊಂದಿದ ಒಂದು ಲ್ಯಾಪ್‌ಟಾಪ್‌ ಅನ್ನು ಹರಾಜಿಗೆ ಹಾಕಲಾಗಿದೆ. ಇಂಥ ವೈರಸ್‌ಗಳನ್ನು ಹೊಂದಿದ ಲ್ಯಾಪ್‌ಟಾಪ್‌ ಅನ್ನು ಒಂದು ಕಲಾತ್ಮಕ ಸಾಮಗ್ರಿಯ ರೀತಿ ಹರಾಜು ಹಾಕಲಾಗುತ್ತಿದೆ.

Advertisement

ಇದನ್ನು ಗುವೋ ಒ ಡಾಂಗ್‌ ಎಂಬ ಕಲಾಕಾರರು ವಿನ್ಯಾಸಗೊಳಿಸಿ, ಡೀಪ್‌ ಇನ್‌ಸ್ಟಿಂಕ್ಟ್ ಎಂಬ ಸೈಬರ್‌ ಸೆಕ್ಯುರಿಟಿ ಸಂಸ್ಥೆ ಹರಾಜಿಗೆ ಹಾಕಿದೆ. ಈಗಾಗಲೇ ಇದು 120 ಕೋಟಿ ಡಾಲರ್‌ (6.5 ಕೋಟಿ ರೂ.) ಮೊತ್ತಕ್ಕೆ ಆನ್‌ಲೈನ್‌ನಲ್ಲಿ ಬಿಡ್‌ ಆಗಿದೆ. ಯಾರು ಬೇಕಾದರೂ ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಬಹುದು.

ಐ ಲವ್‌ ಯು, ಮೈಡೂಮ್‌, ಸೋ ಬಿಗ್‌, ವಾನಾಕ್ರೈ, ಡಾರ್ಕ್‌ ಟೆಕಿಲಾ ಮತ್ತು ಬ್ಲಾಕ್‌ ಎನರ್ಜಿ ಎಂಬ ಅಪಾಯಕಾರಿ ವೈರಸ್‌ಗಳು ಇದರಲ್ಲಿವೆ. ವಾನಾ ಕ್ರೈ ವೈರಸ್‌ ಅಂತೂ ಇಂಗ್ಲೆಂಡ್‌ನ‌ ಆರೋಗ್ಯ ಸೇವೆ ವ್ಯವಸ್ಥೆಯನ್ನೇ ಹಾಳು ಮಾಡಿತ್ತು. ಸುಮಾರು 2 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್‌ಗಳಿಗೆ ಇದು ಬಾಧಿಸಿತ್ತು. 2015ರಲ್ಲಿ ಉಕ್ರೇನ್‌ನಲ್ಲಿ ಬ್ಲಾಕ್‌ ಎನರ್ಜಿ ಎಂಬ ವೈರಸ್‌ ಇಡೀ ದೇಶವನ್ನೇ ಕಂಗೆಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next