Advertisement
ಐಒಬಿ ರೀಜನಲ್ ಕಚೇರಿಯ ಮ್ಯಾನೇಜರ್ ಸೆರಿನ್ ಮಧುಸೂದನ್, ಸಿಜೋ, ಸುನಿಲ್, ಜೆರಿ ಮತ್ತು ಸಲಾಮ್ ಬಂಧಿತರು. ಅವರಿಗೆನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಆರ್‌ಐಡಿಎಲ್‌ನ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ಚುರುಕುಗೊಳಿಸಲಾಗಿತ್ತು. ಇದೀಗ ಬ್ಯಾಂಕ್ ಅಧಿಕಾರಿಗಳ ಕೈವಾಡದಿಂದ ಹಣ ದರ್ಬಳಕೆಯಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಕೆಆರ್ ಐಡಿಎಲ್ ಬ್ಯಾಂಕ್ ಖಾತೆಯಿಂದ 55 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದ್ದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಬ್ಯಾಂಕ್ ಮ್ಯಾನೇಜರ್ ತಲೆಮರೆಸಿಕೊಂಡಿದ್ದರು.