Advertisement

ಕೋವಿಡ್ ನಿಯಂತ್ರಣಕೆ 50 ಲಕ್ಕ ರೂ. ನೆರವು

01:35 PM Apr 23, 2020 | mahesh |

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು, ಇವುಗಳ ಪರವಾಗಿ ಸದ್ಗುರು ಶ್ರೀ ಮಧುಸೂದನ್‌ ಸಾಯಿ, ಕೋವಿಡ್‌-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬುಧವಾರ 50 ಲಕ್ಷ ರೂ.ಗಳನ್ನು ನೀಡಿದ್ದಾರೆ ಶ್ರೀ ಸತ್ಯಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ ಅವರು, ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರನ್ನು ಅಧಿಕೃತ ನಿವಾಸ “ಕಾವೇರಿ’ ಯಲ್ಲಿ ಭೇಟಿಯಾಗಿ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್‌ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್‌ರ ಸಮ್ಮುಖದಲ್ಲಿ ಚೆಕ್‌ ನೀಡಿದರು.

Advertisement

ಶ್ರೀ ಸತ್ಯಸಾಯಿ ಲೋಕ ಸೇವಾ ಸಂಸ್ಥೆ ಮುಖ್ಯ ಸಮನ್ವಯಾಧಿಕಾರಿ ಗೋವಿಂದರೆಡ್ಡಿ, ಆಡಳಿತಾಧಿಕಾರಿ ಶಿವಸುಬ್ರಮಣ್ಯ, ಡಾ.ಸತೀಶ್‌ ಬಾಬು ಇದ್ದರು. ಅಲ್ಲದೆ, ಸಾಮಾಜಿಕ ಕಳಕಳಿ ಇರುವ ಈ ಸಂಸ್ಥೆ ಸುಮಾರು 30 ಲಕ್ಷ ರೂ. ಮೌಲ್ಯದ ಅಡುಗೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನೊಳಗೊಂಡ ಚೀಲಗಳನ್ನು ಹಲವು ರಾಜ್ಯಗಳ ಆರ್ಹ ಜನರಿಗೆ ನೀಡಿದೆ. ಶ್ರೀ ಸತ್ಯಸಾಯಿ ಲೋಕ ಸೇವಾ ಆರೋಗ್ಯ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರು 4500 ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆ ಹೊರ ರೋಗಿಗಳಿಗೆ ಸುಮಾರು 30 ಲಕ್ಷ ರೂ. ಮೌಲ್ಯದ ಮಾತ್ರೆಗಳನ್ನು ಅವರವರ ಮನೆಗಳಿಗೇ ತಲುಪಿಸಿದೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೋವಿಂದರೆಡ್ಡಿ  ಸಿಎಂ ಭೇಟಿ ಬಳಿಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next