Advertisement

5 ಸಾವಿರ ಕೋಟಿ ಸಾಲ ವಂಚನೆ, ಉದ್ಯಮಿ ಸಂದೇಸರಾ ನೈಜೀರಿಯಾಕ್ಕೆ ಪಲಾಯನ?

02:25 PM Sep 24, 2018 | Team Udayavani |

ನವದೆಹಲಿ: 5000 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಒಡೆಯ ನಿತಿನ್ ಸಂದೇಸರಾ ಯುಎಇನಲ್ಲಿ ಇಲ್ಲ, ಬಹುತೇಕ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದು ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಕಳೆದ ತಿಂಗಳಷ್ಟೇ ನಿತಿನ್ ಸಂದೇಸರಾನನ್ನು ದುಬೈನಲ್ಲಿ ಬಂಧಿಸಲಾಗಿತ್ತು ಎಂದು ವರದಿ ತಿಳಿಸಿತ್ತು. ಆದರೆ ಇದೀಗ ಸಿಬಿಐ ಮತ್ತು ಇಡಿ ಮೂಲಗಳ ಪ್ರಕಾರ, ಸಂದೇಸರಾ ಹಾಗೂ ಸಹೋದರ ಚೇತನ್ ಸಂದೇಸರಾ, ದೀಪ್ತಿಬೆನ್ ಸಂದೇಸರಾ ನೈಜೀರಿಯಾದಲ್ಲಿ ಅಡಗಿಕೊಂಡಿರುವುದಾಗಿ ಶಂಕಿಸಿದೆ.

ಭಾರತ ಮತ್ತು ನೈಜೀರಿಯಾ(ಆಫ್ರಿಕಾ)ನಡುವೆ ಹಸ್ತಾಂತರ ಒಪ್ಪಂದವಾಗಲಿ ಅಥವಾ ದ್ವಿಪಕ್ಷೀಯ ಕಾನೂನು ಸಹಕಾರ ಒಪ್ಪಂದವಾಗಲಿ ಇಲ್ಲ. ಈ ನಿಟ್ಟಿನಲ್ಲಿ ಆಫ್ರಿಕಾ ದೇಶದಿಂದ ಸಂದೇಸರಾ ಹಾಗೂ ಕುಟುಂಬ ಸದಸ್ಯರನ್ನು ಭಾರತಕ್ಕೆ ಕರೆತರುವುದು ಕಾನೂನು ರೀತ್ಯ ಕಷ್ಟದ ಕೆಲಸ ಎಂದು ಮೂಲಗಳು ತಿಳಿಸಿವೆ.

ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಪ್ರಕಾರ, ನಿತಿನ್ ಸಂದೇಸರಾನನ್ನು ಯುಎಇ ಅಧಿಕಾರಿಗಳು ಆಗಸ್ಟ್ 2ನೇ ವಾರದಲ್ಲಿ ಬಂಧಿಸಿದ್ದರು ಎಂಬ ಮಾಹಿತಿ ಸತ್ಯವಲ್ಲ. ಆತನನ್ನು ಯಾವತ್ತೂ ದುಬೈಯಲ್ಲಿ ಬಂಧಿಸಿಲ್ಲ. ಸಂದೇಸರಾ ಮತ್ತು ಕುಟುಂಬದ ಸದಸ್ಯರು ನೈಜೀರಿಯಾಕ್ಕೆ ಪಲಾಯನಗೈದಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next