Advertisement

500 ನೋಟು ಮುದ್ರಣ ಚುರುಕು

10:00 AM May 07, 2018 | Team Udayavani |

ಮನಿಲಾ: ಭಾರತದಲ್ಲಿನ ನಗದು ಪೂರೈಕೆ ವ್ಯವಸ್ಥೆ ಸದ್ಯ ತೃಪ್ತಿಕರವಾಗಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ ತಿಳಿಸಿದ್ದಾರೆ. ದೇಶದಲ್ಲಿ ಪ್ರತಿ ದಿನ 3 ಸಾವಿರ ಕೋಟಿ ರೂ. ಮೌಲ್ಯದಷ್ಟು 500 ರೂ.ಗಳ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

ಫಿಲಿಪ್ಪೀನ್ಸ್‌ ನ ಮನಿಲಾದಲ್ಲಿ ರವಿವಾರ ಮಾತನಾಡಿದ ಅವರು, 500 ರೂ., 200 ರೂ, ಮತ್ತು 100 ರೂ. ನೋಟುಗಳು ಜನರ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿವೆ ಎಂದು ಹೇಳಿದ್ದಾರೆ. ಕಳೆದ ವಾರದವರೆಗೆ ಶೇ.85ರಷ್ಟು ಎಟಿಎಂಗಳು ಕಾರ್ಯವೆಸಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. 7 ಲಕ್ಷ ಕೋಟಿ ರೂ. ಮೌಲ್ಯದಷ್ಟು 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಹೀಗಾಗಿ ಹೊಸ 2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತದ ಅಭಿವೃದ್ಧಿಯ ಪ್ರಗತಿ ವೇಗವಾಗಿದೆ: ಭಾರತದ ಜಿಡಿಪಿ ಬೆಳವಣಿಗೆಯು ಪ್ರಸ್ತುತ ವಿತ್ತ ವರ್ಷದಲ್ಲಿ ಶೇ.7 ಇದ್ದು, ಇದು ಉತ್ತಮ ಪ್ರಗತಿಯಾಗಿದೆ. ಇದೇ ವೇಗದಲ್ಲಿ ಮುಂದುವರಿದರೆ ಒಂದು ದಶಕದಲ್ಲಿ ಆರ್ಥಿಕತೆ ದ್ವಿಗುಣಗೊಳ್ಳಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ)ಮುಖ್ಯಸ್ಥ ಯಸುಯುಕಿ ಸವಾಡಾ ಹೇಳಿದ್ದಾರೆ. ಶೇ.8ರ ದರದಲ್ಲಿ ಅಭಿವೃದ್ಧಿ ಸಾಧಿಸಲು ಆಗದಿರುವುದರ ಬಗ್ಗೆ ಯಾವುದೇ ಚಿಂತೆ ಬೇಡ. ಆದರೆ ಆದಾಯ ಅಸಮಾನತೆಯನ್ನು ಕಡಿಮೆ ಮಾಡಿ ದೇಶೀಯ ಬೇಡಿಕೆಯನ್ನು ಹೆಚ್ಚಿಸುವುದರ ಮೇಲೆ ಗಮನಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next