ಹೊಸದಿಲ್ಲಿ: ಜೈಪುರದಲ್ಲಿನ 100 ಪ್ರೈವೇಟ್ ಲಾಕರ್‌ಗಳಲ್ಲಿ 500 ಕೋಟಿ ರೂ.ಗಳಿಗಿಂತ ಅಧಿಕ ಕಪ್ಪುಹಣ ಮತ್ತು 50 ಕೆ.ಜಿ. ಚಿನ್ನವನ್ನು ಇಡಲಾಗಿದ್ದು, ಪೊಲೀಸರು ಅದನ್ನು ಹೊರತೆಗೆಯಬೇಕು ಎಂದು ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಮೀನಾ ಆಗ್ರಹಿಸಿದ್ದಾರೆ.
ಲಾಕರ್ ಯಾರಿಗೆ ಸೇರಿದ್ದು ಎಂದು ಹೇಳಿದರೆ ಅದನ್ನು ತೆರೆಯಲು ಸಾಧ್ಯ ವಾಗದಂತೆ ರಾಜಕೀಯ ಒತ್ತಡ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆ ನೇರವಾಗಿ ಲಾಕರ್ ಇರುವ ಜಾಗಕ್ಕೆ ಕರೆದೊಯ್ಯು ತ್ತೇನೆ. ಪೊಲೀಸರು ಅದನ್ನು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಕಾಂಗ್ರೆಸ್ ತೊರೆದ ಪೊನ್ನಾಲ ಲಕ್ಷ್ಮಯ್ಯ: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿ ತಿಯ ಮಾಜಿ ಅಧ್ಯಕ್ಷ ರಾಗಿದ್ದ ಪೊನ್ನಾಲ ಲಕ್ಷ್ಮ ಯ್ಯ ಕಾಂಗ್ರೆಸ್ ತೊರೆದಿದ್ದಾರೆ. ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ತೆಲಂಗಾಣ ದಲ್ಲಿ ಕಾಂಗ್ರೆಸ್‌ಗೆ ಈ ಬೆಳವಣಿಗೆ ಹಿನ್ನಡೆಯಾದಂತಾಗಿದೆ. ಹಿಂದುಳಿದ ವರ್ಗಗಳಿಗೆ ಆದ್ಯತೆ ಕೋರಿ ಮಾತುಕತೆ ನಡೆಸಲು ದಿಲ್ಲಿಗೆ ಹೋದಾಗ ಪಕ್ಷದ ನಾಯಕರು ತಮ್ಮೊಡನೆ ಮಾತನಾಡಲೂ ಸಿದ್ಧವಿಲ್ಲದೇ ಹೋದದ್ದರಿಂದ ಅವಮಾನವಾಗಿದೆ ಎಂದು ಲಕ್ಷ್ಮಯ್ಯ ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
120 ಗ್ರಾಮಗಳಲ್ಲಿ ಮೊದಲ ಮತದಾನ :
ನಕ್ಸಲ್ ಪೀಡಿತ ಛತ್ತೀಸ್‌ಗಢದಲ್ಲಿ 120 ಗ್ರಾಮಗಳ ನಿವಾಸಿಗಳು ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹಳ್ಳಿಗಳಲ್ಲೇ ಮತ ಚಲಾಯಿಸಲಿದ್ದಾರೆ. ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಂದೆಲ್ಲ ಮಾವೋವಾದಿಗಳ ಹಾವಳಿಯಿಂದಾಗಿ ಹಳ್ಳಿಗಳಿಂದ 8-10ಕಿ.ಮೀ.ದೂರದ ಚುನಾವಣೆ ಕೇಂದ್ರಕ್ಕೆ ತೆರಳಿ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಅವರವರ ಸ್ವಗ್ರಾಮದಲ್ಲೇ ಬೂತ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.