Advertisement
ಬಂಧಿತ ಆರೋಪಿಗಳಿಂದ 36,500 ರೂ. ನಗದು, 2 ಲಕ್ಷ ರೂ. ಮೌಲ್ಯದ 4.5 ಕೆಜಿ. ಬೆಳ್ಳಿ ಆಭರಣಗಳು, 7 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ಮೌಲ್ಯದ 1 ಎಲ್‌ಇಡಿ ಟಿವಿ, 15 ಸಾವಿರ ರೂ. ಮೌಲ್ಯದಸ್ಯಾಮಸಂಗ್ ಮೊಬೈಲ್ ಸೇರಿದಂತೆ ಒಟ್ಟು 9,66,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಪ್ರಕರಣಗಳನ್ನು ಬೇಧಿ ಸುವಲ್ಲಿ ಡಿವೈಎಸ್‌ಪಿ ಡಿ.ಅಶೋಕ ನೇತೃತ್ವದಲ್ಲಿ ರಚಿಸಲಾಗಿದ್ದ ಗ್ರಾಮೀಣ ಸಿಪಿಐ ಶಂಕರಗೌಡ ಬಸನಗೌಡರ, ಬಬಲೇಶ್ವರ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ಬಿ.ಐ. ಹಿರೇಮಠ, ಎಲ್.ಎಸ್.ಹಿರೇಗೌಡ, ಎಂ.ಎನ್. ಮುಜಾವರ, ಜಿ.ವೈ. ಹಡಪದ, ಆರ್.ಡಿ. ಅಂಜುಟಗಿ, ಅಜೀತ ಬಿರಾದಾರ, ವಿ.ಪಿ. ಕುಂಬಾರ, ಬಿ.ಟಿ. ಹೊಸಮನಿ, ಎಂ.ಎಚ್. ಇಚೂರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಈ ತಂಡ ಅಲ್-ಅಮೀನ್ ಬಳಿ ಆರೋಪಿತರನ್ನು ಬಂಧಿಸಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.
ವಿಜಯಪುರ: ನಗರದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಂದ ಕಳೆದ 14 ದಿನಗಳಲ್ಲಿ 600ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 7 ಲಕ್ಷ ರೂ. ದಂಡ ವಿಧಿಸಲಾಗಿದೆ. ಭವಿಷ್ಯದಲ್ಲಿ ವಿಮೆ ಸೇರಿದಂತೆ ವಾಹನಗಳ ಇತರೆ ದಾಖಲೆಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದರು. ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಅಪಘಾತದ ಸಂದರ್ಭದಲ್ಲಿ ದ್ವಿಚಕ್ರ ವಾಹನ
ಸವಾರರ ಸಾವು ಸಂಭವಿಸುವ ಪ್ರಕರಣ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್
ಧರಿಸುವುದು ಸೂಕ್ತ. ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಸೂಕ್ತ ಜಾಗೃತಿ ಬಳಿಕ ಬೈಕ್ ಸವಾರರ ಹೆಲ್ಮೆಟ್ ಧಾರಣೆ
ಕಡ್ಡಾಯಗೊಳಿಸಲಾಗಿದೆ ಎಂದರು.
Related Articles
Advertisement
ಕಳ್ಳನಿಂದ 6 ಬೈಕ್ ಜಪ್ತಿ ವಿಜಯಪುರ: ನಗರದಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವ ಗಾಂಧಿಚೌಕ್ ಠಾಣೆ ಪೊಲೀಸರು 1.20 ಲಕ್ಷ ರೂ. ಮೌಲ್ಯದ 6 ಬೈಕ್ ವಶಕ್ಕೆ ಪಡೆದಿದ್ದಾರೆ. ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಪ್ರಕಾಶ ನಿಕ್ಕಂ, ಬಂಧಿತ ಆರೋಪಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಸತೀಶ ಶಿವಪ್ಪ ಬಡಿವಡ್ಡರ (22) ಎಂದು ಗುರುತಿಸಲಾಗಿದೆ. ಪಿಎಸ್‌ಐ ಆರೀಫ್ ಮುಶಾಪುರಿ ನೇತೃತ್ವದ ತಂಡ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಸರ್ಕಾರಿ ಆಸ್ಪತ್ರೆ ಬಳಿ ಆರೋಪಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ. ಗಸ್ತು ಪೊಲೀಸರು ನಿಲ್ಲಲು ಸೂಚಿಸಿದರೂ ಓಡಿ ಹೋಗಲು ಯತ್ನಿಸಿದಾಗ, ಅನುಮಾನ ಬಂದು ಆರೋಪಿಯನ್ನು ಬೆನ್ನತ್ತಿ ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಿದಾಗ ನಗರದಲ್ಲಿ ತಾನು ಬೈಕ್ ಕಳ್ಳತನ ಮಾಡಿದ್ದನ್ನು ಬಾಯಿ ಬಿಟ್ಟಿದ್ದಾನೆ. ಕೂಡಲೇ ಆರೋಪಿ ಕಳ್ಳತನ ಮಾಡಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಪಿಎಸ್‌ಐ ಆರೀಫ್ ಮುಶಾಪುರಿ, ಪೇದೆಗಳಾದ ಎಂ.ಎನ್. ಜಾಧವ, ಎಸ್.ಎಸ್. ಕೆಂಪೇಗೌಡ, ಸುರೇಶ ಅಡಕಿ, ಆರ್.ಎಸ್. ಪೂಜಾರಿ
ಮೊದಲಾದವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.