Advertisement

ಏರಿಕೆ ಹಾದಿಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ

08:30 AM May 18, 2018 | Team Udayavani |

ಹೊಸದಿಲ್ಲಿ : ಕರ್ನಾಟಕ ಚುನಾವಣೆ ಬಳಿಕ ತೈಲ ಬೆಲೆಯ ಏರಿಕೆಯ ಬಿಸಿ ಮತ್ತೆ ಮುಂದುವರಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ ಗೆ 80 ಅಮೆರಿಕನ್‌ ಡಾಲರ್‌ ಗೆ ಏರಿರುವುದರಿಂದ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ.

Advertisement

ರಾಜಧಾನಿ ದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 76.06 ರೂ. ಆಗಿದ್ದು, ಇದು 2013ರ ಸೆಪ್ಟಂಬರ್‌ ನ ಅನಂತರದ ಗರಿಷ್ಠ ಏರಿಕೆಯಾಗಿದೆ. ಇನ್ನು, ಈ ಮಹಾನಗರದಲ್ಲಿ ಡೀಸೆಲ್‌ ಪ್ರತಿ ಲೀಟರ್‌ಗೆ 66.79 ರೂ.ಗಳಿಗೆ ಏರಿಕೆಯಾಗಿದೆ. ಪ್ರಮುಖ ನಗರಗಳಾದ ಕೋಲ್ಕತಾ, ಮುಂಬಯಿ, ಚೆನ್ನೈನಲ್ಲಿ ಪೆಟ್ರೋಲ್‌ ಬೆಲೆ ಕ್ರಮವಾಗಿ, 78.01ರೂ. , 83.16 ರೂ. ಮತ್ತು 78.16 ರೂ. ಏರಿದ್ದರೆ, ಡೀಸೆಲ್‌ ಬೆಲೆ ಪ್ರತಿ ಲೀಟರ್‌ ಗೆ 69.33 ರೂ., 71.12 ರೂ. ಮತ್ತು 70.49 ರೂ.ಗಳಿಗೆ ಏರಿದೆ. ಏತನ್ಮಧ್ಯೆ, 19 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುವ ತನ್ನ ನಿರ್ಧಾರದಿಂದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಹಿಂದೆ ಸರಿದಿದೆ. 

ಬೆಂಗಳೂರಿನಲ್ಲಿ: ಇದೇ ವೇಳೆ ಬೆಂಗಳೂರಿನಲ್ಲಿಯೂ ಪ್ರತಿ ಲೀಟರ್‌ ಪೆಟ್ರೋಲ್‌ ಗೆ 23 ಪೈಸೆಯಷ್ಟು ಏರಿಕೆಯಾಗಿದೆ. ಹೀಗಾಗಿ ಉದ್ಯಾನ ನಗರಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 76.54 ರೂ. ಆಗಿದೆ. ಡೀಸೆಲ್‌ ದರ ಕೂಡ 23 ಪೈಸೆಯಷ್ಟು ಏರಿಕೆಯಾಗಿದ್ದು, 67.94 ರೂ.ಗಳಿಗೆ ಪರಿಷ್ಕರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next