Advertisement

10 ಕಂಪನಿಗಳಿಂದ 3,200 ಕೋಟಿ ರೂ. ಪಂಗನಾಮ!

07:50 AM Jul 30, 2017 | Team Udayavani |

ಬೆಂಗಳೂರು: ಸೈಟು, ಫ್ಲ್ಯಾಟು, ಅಧಿಕ ಬಡ್ಡಿ ಹಣ ಕೊಡುವ ನೆಪದಲ್ಲಿ ವಂಚಕ ಕಂಪನಿಗಳು ರಾಜ್ಯದ ಜನರಿಂದ ದೋಚಿರುವ ಹಣ 3,273 ಕೋಟಿ ರೂ.ಗಿಂತ ಮಿಗಿಲು! ವಂಚನೆ ಪ್ರಕರಣಗಳ ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳೇ ಈ ಮಾಹಿತಿ ನೀಡಿದ್ದಾರೆ.

Advertisement

ಇಂಥ ವಂಚಕ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಐಡಿ ಸಿದ್ಧತೆ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಕಿಶೋರ್‌ ಚಂದ್ರ ಮಾಹಿತಿ ನೀಡಿದ್ದಾರೆ. ಅಗ್ರಿಗೋಲ್ಡ್‌, ಮೈತ್ರೀ ಪ್ಲಾಂಟೇಷನ್‌, ಡ್ರೀಮ್ಸ್‌ ಇನ್‌ಫ್ರಾ, ಟಿಜಿಎಸ್‌, ಗೃಹ ಕಲ್ಯಾಣ ಸೇರಿದಂತೆ 10 ವಂಚಕ ಕಂಪನಿಗಳು ರಾಜ್ಯದ 17 ಲಕ್ಷ
ಮಂದಿಗೆ ವಂಚಿಸಿವೆ. ಈ ಕಂಪನಿಗಳ ವಿರುದಟಛಿ 2013ರಿಂದ 2016ರವರೆಗೆ 422 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಪಿಗ್ಮಿ, ನಿವೇಶನ ಕೊಡಿಸುವ ನೆಪದಲ್ಲಿ ಅಗ್ರಿಗೋಲ್ಡ್‌ ಸಂಸ್ಥೆಯ ಅವ್ವಾ ವೆಂಕಟ ರಾಮರಾವ್‌ ರಾಜ್ಯದ 8.5 ಲಕ್ಷ ಮಂದಿಗೆ 1,640 ಕೋಟಿ ರೂ. ವಂಚಿಸಿದ್ದಾರೆ. ಹಿಂದೂಸ್ಥಾನ್‌ ಇನ್‌ಪ್ರಕಾನ್‌ ಕಂಪನಿಯ ಲಕ್ಷ್ಮೀನಾರಾಯಣ 389 ಕೋಟಿ ರೂ., ಮೈತ್ರೀ ಪ್ಲಾಂಟೇಷನ್‌ ಮತ್ತು ಹಾರ್ಟಿಕಲ್ಚರ್‌ನ ಕೊಂಡರೆಡ್ಡಿ 9.82 ಕೋಟಿ, ಗ್ರೀನ್‌ ಬಡ್ಸ್‌ ಆಗ್ರೋ ಫಾರಂ ಕಂಪನಿಯ ಬಿ.ಎಲ್‌.ರವೀಂದ್ರನಾಥ 53.88 ಕೋಟಿ, ಹರ್ಷ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ಸುಭೋದ್‌ 136 ಕೋಟಿ, ಡ್ರೀಮ್ಸ್‌ ಇನ್‌ಫ್ರಾ ಕಂಪನಿಯ ಸಚಿನ್‌ ನಾಯಕ್‌, ದೀಶಾ ಚೌಧರಿ 573 ಕೋಟಿ, ಟಿಜಿಎಸ್‌ ಕಂಪನಿಯ ಸಚಿನ್‌ ನಾಯಕ್‌ ಮತ್ತು ಮನ್‌ದೀಪ್‌ ಕೌರ್‌ 260 ಕೋಟಿ, ಗೃಹ ಕಲ್ಯಾಣ ಕಂಪನಿಯ ಸಚಿನ್‌ ನಾಯಕ್‌ ಮತ್ತು ಮಜುಂದಾರ್‌ ಶತಪರ್ಣಿ 277 ಕೋಟಿ, ಸೆವೆನ್‌ ಹಿಲ್ಸ್‌ ಕಂಪನಿಯ ಜಿ.ನಾರಾಯಣಪ್ಪ 81 ಕೋಟಿ, ವೃಕ್ಷ ಬಿಜಿನೆಸ್‌ ಸೊಲ್ಯೂಶನ್‌ನ ಜೀವರಾಜ್‌ ಪುರಾಣಿಕ್‌ 31 ಕೋಟಿ ರೂ. ಸಂಗ್ರಹಿಸಿ ದ್ದಾರೆಂದು ವಿವರಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ: ಕರ್ನಾಟಕ ರಾಜ್ಯ ಠೇವಣಿದಾರರ ಹಿತಾಸಕ್ತಿ ಸಂರಕ್ಷಣ ಅಧಿ ನಿಯಮ 2004 ಕಲಂ 3ರ ಅಡಿಯಲ್ಲಿ ಆರೋಪಿ ಸಂಸ್ಥೆಗಳ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅವು ಗಳ ಹರಾಜು ಪ್ರಕ್ರಿಯೆ ನಡೆಸಿ ಸಿಗುವ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಬೇಕೆಂದು ಸರ್ಕಾರಕ್ಕೆ ಸಿಐಡಿಯ ಆರ್ಥಿಕ ಅಪರಾಧಗಳ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಅಗ್ರಿಗೋಲ್ಡ್‌ನ 430 ಎಕರೆ ಜಮೀನು, ಮೈತ್ರೀ ಪ್ಲಾಟೆಂಷನ್‌ ಅಂಡ್‌ ಹಾರ್ಟಿಕಲ್ಚರ್‌ನ 383 ಎಕರೆ ಜಮೀನು ಮತ್ತು ಗ್ರೀನ್‌ ಬಡ್ಸ್‌ ಆಗ್ರೋ ಫಾರಂನ 205 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕಿಶೋರ್‌ ಚಂದ್ರ ತಿಳಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next