ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3,200 ಕೋಟಿ ರೂ. ಅನುದಾನ ನೀಡಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 121ರಷ್ಟು ಹೆಚ್ಚು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ನಗರದಲ್ಲಿ 6ನೇ ದಕ್ಷಿಣ ಭಾರತೀಯ ಮುಸ್ಲಿಂ ಸಂಘಟನೆಗಳ 2 ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಲ್ಪಸಂಖ್ಯಾತರಿಗಾಗಿ ಪ್ರಧಾನಿ ಮೋದಿ 4,117 ಕೋಟಿ ರೂ. ನೀಡಿದ್ದಾರೆ. ಆದರೆ, ರಾಜ್ಯದ ಅಲ್ಪಸಂಖ್ಯಾತರಿಗಾಗಿಯೇ ಸಿಎಂ 3,200 ಕೋಟಿ ರೂ. ಕೊಟ್ಟಿದ್ದಾರೆ. ಇದು ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇರುವ ಕಳಕಳಿ ಮತ್ತು ಬದ್ಧತೆ ಎಂದರು.
ಕಾಲೇಜು ಮಂಜೂರು: ಸಾಮಾಜಿಕ ಕಾರ್ಯಕರ್ತ ಹರೇಕಲಾ ಹಾಜಬ್ಬ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಮಂಗಳೂರಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಮಂಜೂರು ಮಾಡಲಾಗುವುದು.ಇದಕ್ಕೆ ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ಕೂಡ ಕೈಜೋಡಿಸಲಿದ್ದಾರೆ ಎಂದು ಭರವಸೆ ನೀಡಿದರು. ಇದೇ ವೇಳೆ ಮಂಗಳೂರು ಮತ್ತು ಗೋವಾ ವಿವಿಗಳ ವಿಶ್ರಾಂತ ಕುಲಪತಿ ಡಾ.ಬಿ. ಶೇಖ್ ಆಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಮುಂಬೈನ ಉಮೀದ್ ಸಂಸ್ಥೆ ಅಧ್ಯಕ್ಷೆ ಸಲ್ಮಾ ಮೇಮಮ್ ಅವರಿಗೆ ಯುವ ಸಾಮಾಜಿಕ ನಾಯಕಿ ಪ್ರಶಸ್ತಿ, ಸಮರಿಕಲ್
ಹೆಲ್ಪ್ ಮಿಷನ್ (ಕೋಲ್ಕತಾ) ಅಧ್ಯಕ್ಷ ಮಾಮೂಲ್ ಅಖ್ತರ್, ತುಮಕೂರಿನ ತುರುವೆಕೆರೆಯ ರೆಹನಾ ಬೇಗಂ,ಹರೇಕಲಾ ಹಾಜಬ್ಬ ಅವರಿಗೆ “ಸೋಶಿಯಲ್ ಹೀರೋ’ ಪ್ರಶಸ್ತಿ ನೀಡಲಾಯಿತು.