Advertisement
60 ವರ್ಷವಾದ ಬಳಿಕ ಕನಿಷ್ಠ 3,000 ರೂ. ಮಾಸಿಕ ಪಿಂಚಣಿ ಜೀವಿತದ ಕೊನೆಯವರೆಗೆ ದೊರೆಯ ಲಿದೆ. ಇದು ಭವಿಷ್ಯದಲ್ಲಿ ಏರಿಕೆಯಾಗಲೂಬಹುದು. ಈಗ ಖಾತ್ರಿ ಪಡಿಸಿದ ಮೊತ್ತ 3,000 ರೂ. ಚಂದಾದಾರ/ ಚಂದಾ ದಾರಳು ಮೃತ ಪಟ್ಟರೆ ಸಂಗಾತಿ ನಾಮಿನಿಗೆ ಅರ್ಧ ಅಂಶ ಪಿಂಚಣಿ ದೊರೆಯಲಿದೆ. 60 ವರ್ಷದೊಳಗೆ ಮೃತಪಟ್ಟರೆ ಯೋಜನೆಯನ್ನು ಮುಂದುವರಿಸಲು ನಾಮಿನಿಗೆ ಅವಕಾಶವಿದೆ. ಹತ್ತು ವರ್ಷದೊಳಗೆ ಯೋಜನಯಿಂದ ನಿರ್ಗಮಿಸಿದರೆ ಪಾವತಸಿದ ಮೊತ್ತ ಮತ್ತು ಉಳಿತಾಯ ಖಾತೆಯ ಬಡ್ಡಿ ದರ ವಾಪಸು ಕೊಡಲಾಗುವುದು. 10 ವರ್ಷಗಳ ಬಳಿಕ ನಿರ್ಗಮಿಸಿದರೆ ಪಾವತಿಸಿದ ಮೊತ್ತ ಮತ್ತು ಹಣವನ್ನು ಹೂಡಿಕೆ ಮಾಡಿದ ಸಂಸ್ಥೆಯಲ್ಲಿರುವ ಬಡ್ಡಿ ದರ ಸೇರಿಸಿ ಕೊಡಲಾಗುವುದು. ಒಂದು ವೇಳೆ ಅರ್ಧಕ್ಕೆ ನಿಲ್ಲಿಸಿದಲ್ಲಿ ಮುಂದೆ ದಂಡ ಶುಲ್ಕ ಪಾವತಿಸಿ ಮುಂದುವರಿಸಲು ಅವಕಾಶವಿದೆ.
ದೇಶಾದ್ಯಂತ 2 ವರ್ಷಗಳ ಹಿಂದೆ ಸುಮಾರು 2.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ತೆರೆಯ ಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ130 ಕೇಂದ್ರಗಳಿವೆಯಾದರೂ 52 ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಸಿಎಸ್‌ಸಿಗೆ ಇಬ್ಬರು ವ್ಯವಸ್ಥಾಪಕರು ನಿಯೋ ಜನೆಗೊಂಡಿದ್ದಾರೆ. ನಿತೀಶ್ ಶೆಟ್ಟಿಗಾರ್ ಅವರು ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ತಾಲೂಕು ವ್ಯಾಪ್ತಿಯನ್ನು ಹೊಂದಿದ್ದರೆ ಗೋವರ್ಧನ ಎಚ್. ಅವರು ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿಯನ್ನು ಹೊಂದಿದ್ದಾರೆ. ದ.ಕ. ಜಿಲ್ಲೆಯಲ್ಲಿ ಸುಮಾರು 130 ಸಿಎಸ್‌ಸಿಗಳಿವೆ. ಇಲ್ಲಿ ಸಿಎಸ್‌ಸಿಗೆ ವ್ಯವಸ್ಥಾಪಕರ ನೇಮಕಾತಿ ಆಗಿಲ್ಲ. ಸದ್ಯ ಸೇವಾ ಸಿಂಧು ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಭರತ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಸಿಎಸ್‌ಸಿ ಕೇಂದ್ರಗಳ ಮಾಹಿತಿಗಾಗಿ ನಿತೀಶ್ ಶೆಟ್ಟಿಗಾರ್ 9591646024, ಗೋವರ್ಧನ್ 8217840512, ಭರತ್‌ಕುಮಾರ್ 9591102450 ಇವರನ್ನು ಸಂಪರ್ಕಿಸಬಹುದು.
Related Articles
18ನೆಯ ವರ್ಷಕ್ಕೆ ಯೋಜನೆಗೆ ಸೇರಿದರೆ ತಿಂಗಳಿಗೆ 55 ರೂ. ಕಟ್ಟಿದರೆ ವರ್ಷಕ್ಕೆ 660 ರೂ. ಕಟ್ಟಿದಂತಾಗುತ್ತದೆ. 60ನೇ ವರ್ಷದವರೆಗೆ ಒಟ್ಟು 27,720 ರೂ. ಪಾವತಿಸಿದಂತಾಗುತ್ತದೆ. 40ನೆಯ ವರ್ಷದಲ್ಲಿ ಸೇರಿದರೆ ತಿಂಗಳಿಗೆ 200 ರೂ. ಕಟ್ಟಬೇಕು. 60ನೆಯ ವರ್ಷದವರೆಗೆ 48,000 ರೂ. ಪಾವತಿಸಿದಂತಾಗುತ್ತದೆ. 60ನೆಯ ವರ್ಷದಲ್ಲಿ ತಿಂಗಳಿಗೆ 3,000 ರೂ. ಪಿಂಚಣಿ ಸಿಗುವಾಗ ಚಂದಾದಾರರು ಪಾವತಿಸಿದ ಮೊತ್ತ ಸುಮಾರು ಒಂದು ವರ್ಷದಲ್ಲಿ ಸಿಕ್ಕಿದಂತಾಗುತ್ತದೆ. ಇದು ಬಡವರ್ಗಕ್ಕೆ ಸಿಗುವ ಅನುಕೂಲವಾಗಿದೆ.
ಸೌರಭ ಕುಮಾರ್, ಭವಿಷ್ಯನಿಧಿ ಅಧಿಕಾರಿ
Advertisement
ಯಾರು ಅರ್ಹರು? ಯಾರು ಅನರ್ಹರು?*ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ- ಟ್ಯಾಕ್ಸಿ ಚಾಲಕರು, ಮನೆಗಳಲ್ಲಿ ಸಣ್ಣ ಪುಟ್ಟ ವ್ಯವಹಾರ ಮಾಡುವವರು, ಚಿಂದಿ ಆಯುವವರು, ಮನೆ ಕೆಲಸದವರು, ನಿರ್ಮಾಣ ಕೆಲಸಗಾರರು, ದಿನಗೂಲಿ ನೌಕರರು, ಭೂರಹಿತ ಕಾರ್ಮಿಕರು, ಚರ್ಮದ ಕೆಲಸಗಾರರು, ಬೀಡಿ ಕಾರ್ಮಿಕರು ಮೊದಲಾದವರು.
*ವ್ಯಕ್ತಿಗಳ ಮಾಸಿಕ ಆದಾಯ 15,000 ರೂ. ಮೀರಿರಬಾರದು.
*18ರಿಂದ 40 ವರ್ಷದ ವರೆಗಿನವರು ನೋಂದಾಯಿಸಬಹುದು.
* ಸಂಘಟಿತ ವಲಯದಲ್ಲಿರಬಾರದು ಅಥವಾ ಭವಿಷ್ಯನಿಧಿ, ಎನ್‌ಪಿಎಸ್, ಇಎಸ್‌ಐ ಯೋಜನೆಯಡಿ ಸೇರಿರಬಾರದು.
* ಆದಾಯ ತೆರಿಗೆ ಪಾವತಿದಾರರು ಆಗಿರಬಾರದು.
* ಅಟಲ್ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಪಡೆಯುವವರೂ ಅರ್ಜಿ ಸಲ್ಲಿಸಬಹುದು.
ಪಾವತಿ ಕ್ರಮ
18ರಿಂದ 40 ವರ್ಷಗಳ ವರೆಗೆ ಯೋಜನೆಗೆ ಸೇರುವವರಿಗೆ ಪ್ರತ್ಯೇಕ ದೇಣಿಗೆ ಮೊತ್ತ ನಮೂದಿಸಲಾಗಿದೆ. ಇದಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಒಂದು ಬಾರಿ ಸೇರಿದರೆ 60 ವರ್ಷಗಳ ವರೆಗೆ ಚಂದಾದಾರರು ಪ್ರತಿ ತಿಂಗಳು ದೇಣಿಗೆ ಮೊತ್ತವನ್ನು ಪಾವತಿಸಬೇಕು. ನೋಂದಣಿ ಕ್ರಮ
* ಚಂದಾದಾರರು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಕಾಮನ್ ಸರ್ವಿಸ್ ಸೆಂಟರ್) ತೆರಳಿ ಹೆಸರು ನೋಂದಾಯಿಸಬೇಕು. ಎಲ್‌ಐಸಿ, ಇಎಸ್‌ಐ, ಭವಿಷ್ಯನಿಧಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕರ ಕಚೇರಿಗಳಲ್ಲಿ ಮಾಹಿತಿ ದೊರಕುತ್ತದೆ.
* ಚಂದಾದಾರರು ಮೊಬೈಲ್ ಫೋನ್, ಉಳಿತಾಯ/ ಜನಧನ್ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.
* ಸ್ವಯಂ ಘೋಷಣೆ ಮೂಲಕ ನೋಂದಣಿ ಮಾಡಲಾಗುವುದು. ವಯಸ್ಸು ಮತ್ತು ಆದಾಯ ವಿವರಗಳಿಗೆ ಪ್ರತ್ಯೇಕ ದಾಖಲಾತಿ ಕೊಡುವುದು ಬೇಡ. ಸ್ವಯಂ ಪ್ರಮಾಣೀಕರಣ, ಆಧಾರ್ ಸಂಖ್ಯೆಯೇ ದಾಖಲಾತಿ.
* ಯಾವುದೇ ವಿದ್ಯಾರ್ಹತೆ ಮಾನದಂಡವಿಲ್ಲ.
* ಆರಂಭದಲ್ಲಿ ನಗದು ರೂಪದಲ್ಲಿ ದೇಣಿಗೆಯನ್ನು ಕಟ್ಟಿದರೆ ಅನಂತರ ಬ್ಯಾಂಕ್ ಖಾತೆಯಿಂದ ಜಮೆ ಆಗಲಿದೆ. ಮಟಪಾಡಿ ಕುಮಾರಸ್ವಾಮಿ