Advertisement
ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬರುವಂತೆ ಮೂವರು ಚೋರರು ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ನಸುಕಿನ ಹೊತ್ತಿನಲ್ಲಿ ಬ್ಯಾಂಕಿನಿಂದ ಒಯ್ಯುತ್ತಿರುವುದು ದಾಖಲಾಗಿದೆ.
#CCTV Thieves walk out one by one after robbing Rs 3 crores from a Bank of Baroda branch in Navi Mumbai (12.11.17) pic.twitter.com/YjPYLuXabv— ANI (@ANI) November 17, 2017Related Articles
Advertisement
ಈ ಚೋರ ಕೃತ್ಯಕ್ಕಾಗಿ ಬ್ಯಾಂಕಿನ ಲಾಕರ್ ಇರುವ ಸ್ಥಳವನ್ನು ತಲುಪಲು ಕಳ್ಳರು 25 ಅಡಿ ಉದ್ದದ ಸುರಂಗವನ್ನು ತೋಡಿದ್ದರು ಎಂದು ವರದಿಯಾಗಿತ್ತು.
ಲಾಕರ್‌ಗಳಿರುವ ಬ್ಯಾಂಕಿನ ಸ್ಟೋರ್ ರೂಮ್ ನ ಹೊರಗೆ ಕಟ್ಟಡಕ್ಕೆ ತಾಗಿಕೊಂಡೇ ಇರುವ ಅಂಗಡಿಯೊಳಗಿನಿಂದ ಕಳ್ಳರು ಸುರಂಗವನ್ನು ಕೊರೆದಿದ್ದರು.
ಈ ಸುರಂಗದ ಮೂಲಕ ವಾರಾಂತ್ಯ ಬಾಂಕ್ ಶಾಖೆಯ ಲಾಕರ್ ಕೋಣೆಯನ್ನು ತಲುಪಿದ ಕಳ್ಳರು 225 ಲಾಕರ್‌ಗಳ ಪೈಕಿ 30 ಲಾಕರ್‌ಗಳನ್ನು ಒಡೆದು ಅತ್ಯಮೂಲ ನಗ, ನಗದನ್ನು ಹಾಗೂ ದಾಖಲೆ ಪತ್ರಗಳನ್ನು ಕದ್ದೊಯ್ದಿದ್ದಾರೆ.
ನ.13ರಂದು ಬೆಳಗ್ಗೆ ಬ್ಯಾಂಕ್ ಶಾಖೆ ವ್ಯವಹಾರಕ್ಕೆ ತೆರೆಯಲ್ಪಟ್ಟಾಗಲೇ ಕಳ್ಳತನದ ಕೃತ್ಯ ಬೆಳಕಿಗೆ ಬಂತು.