Advertisement
3.31 ಕೋಟಿ ರೂ. ಅನುದಾನ ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ 3.31 ಕೋಟಿ ರೂ. ಬಿಡುಗಡೆಗೊಂಡಿದೆ. ಈ ಅನುದಾನದಲ್ಲಿ ಹವಲ್ದಾರ್‌ಬೆಟ್ಟು, ಬಂಗ್ಲೆಗುಡ್ಡೆ ಕಜೆ ಒಂದನೇ ವಾರ್ಡ್ ಮತ್ತು ಎರಡನೇ ವಾರ್ಡ್, ಮಾರ್ಕೆಟ್ ರೋಡ್ ರಣವೀರ ಕಾಲನಿ, ದಾನಶಾಲೆ ರಸ್ತೆ, ಕುಂಬ್ರಿಪದವು, ಪತ್ತೂಂಜಿಕಟ್ಟೆ, ಶಾಂತಿನಗರ ರಸ್ತೆ, ಬಂಡಿಮಠ, ಕಾವೆರಡ್ಕ ಕಾಲನಿ ರಸ್ತೆ ಅಭಿವೃದ್ಧಿ, ಚರಂಡಿ ಕಾಮಗಾರಿ ನಡೆಯಲಿದೆ. ಕೆಲವೊಂದು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಾಮಗಾರಿ ಪ್ರಗತಿಯಲ್ಲಿದೆ.
ಸಾಲ್ಮರದ ಗ್ಯಾಲಕ್ಷಿಯಿಂದ ಜಯಭಾರತಿ ವರೆಗಿನ 510 ಮೀಟರ್ ರಸ್ತೆಗೆ ಈಗ ಡಾಮರು ಹಾಕಲಾಗುತ್ತಿದೆ. 22 ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಇಲ್ಲಿ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲೆಡೆ ಕಿರಿದಾದ ರಸ್ತೆಗಳು
ಪುರಸಭೆ ವ್ಯಾಪ್ತಿಯ ಬಹುತೇಕ ಎಲ್ಲ ರಸ್ತೆಗಳು ತೀರಾ ಕಿರಿದಾಗಿವೆ. ಹೀಗಾಗಿ ಮುಖ್ಯರಸ್ತೆಯೊಂದಿಗೆ ಒಳರಸ್ತೆಗಳು ಕೂಡ ಅಗಲೀಕರಣಗೊಳ್ಳಬೇಕು.
ಡಾಮರೀಕರಣವೂ ಆಗಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿತ್ತು. ಆದರೆ ನಗರೋತ್ಥಾನ ಯೋಜನೆಯಡಿ ಸೀಮಿತ ಅನುದಾನ ಬಿಡುಗಡೆಗೊಂಡಿರುವುದರಿಂದ ಎಲ್ಲ ರಸ್ತೆಗಳ ಅಭಿವೃದ್ಧಿ ಈ ಅನುದಾನದಲ್ಲಿ ಅಸಾಧ್ಯವಾಗಿದೆ.
Related Articles
ಗ್ಯಾಲಕ್ಷಿ ಸಭಾಭವನದಿಂದ ಜಯಭಾರತಿ ವರೆಗೆ ಅಳವಡಿಸಲಾದ ಬೀದಿದೀಪಗಳು ಉರಿಯುತ್ತಿಲ್ಲ. ಡಿವೈಡರ್ ಮಧ್ಯದಲ್ಲಿ ಅಳವಡಿಸಲಾದ ಬೀದಿದೀಪಗಳು ಕಳೆದ ಒಂದು ವರ್ಷದಿಂದ ಉರಿಯದಿದ್ದರೂ ಪುರಸಭೆ ಮೌನವಾಗಿದೆ. ಈ ಭಾಗದಲ್ಲಿ ಬೀದಿನಾಯಿಗಳ ಕಾಟವೂ ವಿಪರೀತವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
Advertisement
ದುರಸ್ತಿಗೆ ಕೊಟೇಶನ್ ಮುಖ್ಯರಸ್ತೆ ಕಾಮಗಾರಿ ಮೂರು ದಿನಗಳಲ್ಲಿ ಪೂರ್ಣವಾಗಲಿದೆ. ಡಿವೈಡರ್ ಲೈಟ್ ದುರಸ್ತಿಪಡಿಸುವ ನಿಟ್ಟಿನಲ್ಲಿ ಕೊಟೇಶನ್ ಕರೆಯಲಾಗಿದೆ.
-ಪದ್ಮನಾಭ ಎನ್.ಕೆ., ಪುರಸಭಾ ಎಂಜಿನಿಯರ್ ದುರಸ್ತಿಗೆ ಕೊಟೇಶನ್
ಮುಖ್ಯರಸ್ತೆಯ ಒಂದು ಭಾಗ ಮಾತ್ರ ಇದೀಗ ಡಾಮರೀಕರಣಗೊಳ್ಳುತ್ತಿದೆ. ನಗರದ ಮುಖ್ಯರಸ್ತೆಯನ್ನು ಒಮ್ಮೆಗೆ ಡಾಮರೀಕರಣಗೊಳಿಸುವ ನಿಟ್ಟಿನಲ್ಲಿ ಪುರಸಭೆ ಕ್ರಮ ಕೈಗೊಳ್ಳಬೇಕಿತ್ತು. ಪುರಸಭೆಗೆ ಚುನಾವಣೆ ಆಗಿ ವರ್ಷವಾದರೂ ಅಧ್ಯಕ್ಷರ ನೇಮಕವಾಗದಿರುವುದು ಪುರಸಭೆಯ ಆಡಳಿತ ಕಾರ್ಯಗಳಿಗೆ ಅಡ್ಡಿಯಾಗಿರಬಹುದು.
-ಅರುಣ್ ಪುರಾಣಿಕ್, ಸಾಮಾಜಿಕ ಮುಂದಾಳು